ದಾವಣಗೆರೆ: ಯಾರೇ ಪ್ರತಿ ಸ್ಪರ್ಧಿ ಇದ್ದರೂ ಕಾಂಪಿಟೇಷನ್ ಇದ್ದೆ ಇರತ್ತೆ. ಹಳಬರು ಇರಲಿ, ಹೊಸಬರೇ ಇರಲಿ. ನಾವು ಅಭಿವೃದ್ಧಿ ಮೇಲೆ ಓಟ್ ಕೇಳುತ್ತೇವೆ. ಪ್ರಜ್ಞಾವಂತ ಮತದಾರರು ಆಲೋಚನೆ ಮಾಡಿ ಮತ ನೀಡಬೇಕು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಿದೆ. ಇದರೊಂದಿಗೆ ನನ್ನ ಜವಾಬ್ದಾರಿ ಕೂಡ ಹೆಚ್ಚಿದೆ. ಹೈಕಮಾಂಡ್ ಆಶಯಕ್ಕೆ ತಕ್ಕಂತೆ ದಾವಣಗೆರೆ ಲೋಕಸಭೆ ಕ್ಷೇತ್ರವನ್ನು ಗೆದ್ದು ಪಕ್ಷದ ಕೈ ಬಲಪಡಿಸಬೇಕಿದೆ. ಜಿಲ್ಲೆಯಲ್ಲಿ ಏಳು ಕಾಂಗ್ರೆಸ್ ಶಾಸಕರಿದ್ದಾರೆ. ಸದ್ಯದಲ್ಲಿಯೇ ಶಾಸಕರ ಸಭೆ ಕರೆದು ಸ್ಟ್ರಾಟಜಿ ರೂಪಿಸುತ್ತೇವೆ. ನಾವು ಸ್ಥಳೀಯ ಸಮಸ್ಯೆಗಳಿಗೆ ಒತ್ತು ನೀಡುತ್ತೇವೆ. ಜನರಿಗೆ ಹೆಚ್ಚಿನ ಸಮಯ ನೀಡಿ ಜನರ ಅಹವಾಲು ಆಲಿಸುತ್ತೇವೆ. ಇದರಲ್ಲಿ ಒಂದೇ ಫ್ಯಾಮಿಲಿಗೆ ಟಿಕೆಟ್ ನೀಡಿರುವ ಪ್ರಶ್ನೆ ಇಲ್ಲ ಎಂದರು.
ಮಾವ ಡಾ. ಶಾಮನೂರು ಶಿವಶಂಕರಪ್ಪ, ಪತಿ ಎಸ್.ಎಸ್ ಮಲ್ಲಿಕಾರ್ಜುನ್, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷದ ಶಾಸಕರು, ಹಿತೈಷಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಎಲ್ಲಾ ಹಂತದ ನಾಯಕರ ಸಹಕಾರದೊಂದಿಗೆ ಮುನ್ನಡೆಯುವೆ. ನಾವೇನು ಟಿಕೆಟ್ ನಮಗೆ ಬೇಕು ಅಂತ ಕೇಳಿಲ್ಲ. ಶಾಸಕರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯದ ಮೇಲೆ ಕೊಟ್ಟಿದ್ದಾರೆ.ಮೇಲಾಗಿ ಯಾವತ್ತು ನಾನೇ ಕ್ಯಾಂಡಿಡೇಟ್ ಅಂತ ಹೇಳಿಲ್ಲ. ಪೋಲಿಂಗ್ ಮಾಡಿದ್ದರ ಮೇಲೆ ಸ್ಟ್ರಾಂಗ್ ಕ್ಯಾಂಡಿಡೇಟ್ ನೋಡಿ ಕೊಟ್ಟಿದ್ದಾರೆ ಎಂದರು.



