ದಾವಣಗೆರೆ: ನಗರದ ಪಿಬಿ ರಸ್ತೆಯಲ್ಲಿ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು (ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕ ಸೇರಿ) ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 76 ಸಾವಿರ ಬೆಲೆ ಬಾಳುವ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಮಾ.07 ರಂದು ರಂದು ಆಕಾಶ್ ಪಿ.ಕೆ ಎಂಬುವವರು ನಗರದ ಸಾಯಿ ಇಂಟರ್ ನ್ಯಾಷನಲ್ ಹೊಟೇಲ್‌ನಲ್ಲಿ ಕೆಲಸ ಮುಗಿಸಿಕೊಂಡು, ಪಿ.ಬಿ ರಸ್ತೆಯ ಟಿ.ವಿ.ಎಸ್ ಶೂ ರೂಂ ಹಾಗೂ ಬಾರತ್ ಪೇಟ್ರೋಲ್ ಬಂಕ್ ಮುಂಭಾಗ ನಡೆದಕೊಂಡು ದೇವರಾಜ್ ಅರಸ್ ಬಡಾವಣೆಯ ರೂಂಗೆ ಹೊಗುತ್ತಿರುವಾಗ ಸಂಗೊಳ್ಳಿ ರಾಯಣ್ಣ ಸರ್ಕಲ್ ಕಡೆಯಿಂದ ಯಾರೋ ಇಬ್ಬರು ಆಪರಿಚಿತ ವ್ಯಕ್ತಿಗಳು ಸ್ಕೂಟಿಯಲ್ಲಿ ಬಂದು ಎಣ್ಣೆ ಅಂಗಡಿ ಎಲ್ಲಿದೆ ಎಂದು ಕೇಳಿದ್ದಾರೆ. ಮುಂದೆ ಇದೇ ಹೋಗಿ ಎಂದಿದ್ದಾರೆ. ನಾವು ಹೊಸಬರು ನೀನು ಬಂದು ತೋರಿಸಲು ಬಾ ಎಂದಿದ್ದಾರೆ. ಆಗ ರೂಂಗೆ ಹೋಗಬೇಕು ಎಂದಿದ್ದಕ್ಕೆ ಸ್ಕೂಟಿಯಲ್ಲಿ ಹಿಂದೆ ಕುಳಿತ್ತಿದ್ದವ ಏಕಾಏಕಿ ಕಪಾಳಕ್ಕೆ ಹೊಡೆದು ದೂರದಾರ ಹತ್ತಿರ ಇದ್ದ 6 ಸಾವಿರ ಬೆಲೆಯ ಸ್ಮಾರ್ಟ್ ಮೊಬೈಲ್ ಪೋನ್ ನ್ನು ಚಾಕು ತೋರಿಸಿ ಬಲವಂತಾವಾಗಿ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಸ್ವತ್ತು ಮತ್ತು ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿಗಳನ್ನೊಳಗೊಂ ತಂಡವನ್ನು ರಚಿಸಲಾಗಿತಗತು. ಈ ತಂಡವು ಆರೋಪಿತ ಸಂಗೇಮೇಶ್.ಬಿ. ರೆಡಿಯಂ ಸ್ಟೀಕರ್ ಕೆಲಸ ವಾಸ-ಸಿಂಗದೂರು ಚೌಡೇಶ್ವರಿ ಹೋಟೇಲ್ ಹಿಂಭಾಗ ಪಿ .ಬಿ ರಸ್ತೆ ದಾವಣಗೆರೆ ಮತ್ತು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ವಶಕ್ಕೆ ಪಡಡಯಲಾಗಿದೆ.
ಸುಲಿಗೆ ಮಾಡಿದ್ದ 6000/-ರೂ ಬೆಲೆ ಮೌಲ್ಯದ ಮೊಬೈಲ್ ಮತ್ತು ಕೃತ್ಯಕ್ಕೆ ಬಳಿಸಿದ್ದ 70,000/-ರೂ ಬೆಲೆ ಬಾಳುವ ಆಕ್ಟೀವ್ ಹೊಂಡಾ ಸ್ಕೂಟರ್ ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿತರ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಮೇಲ್ಕಂಡ ಅಧಿಕಾರಿಗಳು ಸೇರಿದಂತೆ ಪಿಎಸ್ ಐ ವಿಶ್ವನಾಥ ಹಾಗೂ ಸಿಬ್ಬಂದಿಗಳಾದ ಆನಂದ ಮುಂದಲಮನಿ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಯೋಗೀಶ್ ನಾಯ್ಕ, ಗೋಪಿನಾಥ ಬಿ ನಾಯ್ಕ, ಲಕ್ಷ್ಮಣ್ ಆರ್, ನಾಗರಾಜ ಕೂಲೇರ, ಮಂಜುನಾಥ ಬಿ.ವಿ ಅವರಿಗೆ ಎಸ್ಪಿ ಉಮಾ ಪ್ರಶಾಂತ್ ಐಪಿಎಸ್ ಹಾಗೂ ಹೆಚ್ಚುವರಿ ಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



