ಬೆಂಗಳೂರು: 10 ದಿನಗಳ ಕಾಲ ಎಲ್ಲಾ ಕರ್ನಾಟಕದ ಐದು ಎಸ್ಕಾಂಗಳ ಆನ್‌ಲೈನ್ ಸೇವೆಗಳು ಬಂದ್ ಆಗಲಿವೆ. ತಂತ್ರಾಂಶ ಉನ್ನತೀಕರಣ ಹಿನ್ನೆಲೆಯಲ್ಲಿ ಇಂಧನ ಇಲಾಖೆಯ ವ್ಯಾಪ್ತಿಯ ಎಲ್ಲ ಎಸ್ಕಾಂಗಳಲ್ಲಿ ಆನ್ ಲೈನ್ ಸೇವೆ ಕಡಿತಗೊಳಿಸಿದೆ. ಮಾರ್ಚ್ 10 ರಿಂದ 19 ರವರೆಗೆ ಆನ್‌ಲೈನ್ ಸೇವೆ ಲಭ್ಯವಿರುವುದಿಲ್ಲ.
ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಹೆಸರು, ಜಕಾತಿ ಬದಲಾವಣೆ ಸೇರಿ ಯಾವುದೇ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಎಸ್ಕಾಂ ಮಾಹಿತಿ ನೀಡಿದೆ. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ, ಕಡಿತವಾಗಲಿ ಇರಲ್ಲ. ರಾಜ್ಯದ ಎಲ್ಲಾ ಎಸ್ಕಾಂಗಳ ಆನ್‌ಲೈನ್ ಸೇವೆ ಮಾತ್ರ ಗ್ರಾಹಕರಿಗೆ ಲಭ್ಯ ಇಲ್ಲ, ಬೆಸ್ಕಾಂ, ಜೆಸ್ಕಾಂ, ಸೆಸ್ಕ್, ಮೆಸ್ಕಾಂ, ಹೆಸ್ಕಾಂ ನಲ್ಲಿ ಆನ್ ಲೈನ್ ಸೇವೆ ಅಲಭ್ಯವಾಗಲಿದೆ.
ತಂತ್ರಾಂಶವು ಕಾರ್ಯಾರಂಭಗೊಂಡ ನಂತರ ಸ್ಥಿರಗೊಳ್ಳಲು 15 ದಿನಗಳ ಕಾಲಾವಕಾಶ ಬೇಕು. ಸಾಫ್ಟ್ವೇರ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಪಾವತಿ ಕಷ್ಟವಾಗಲಿದೆ. ಆ ಸಂದರ್ಭ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದಿಲ್ಲ ಎಂದು ಎಸ್ಕಾಂ ಸ್ಪಷ್ಟಪಡಿಸಿದೆ.



