ದಾವಣಗೆರೆ: ಅತಿ ವೇಗವಾಗಿ ರೈಡ್ ಮಾಡಿದ ಪರಿಣಾಮ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸವಾರನೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಶಿಕಾರಿಪುರ ರಸ್ತೆಯ ಗಡಿಚೌಡಮ್ಮನ ದೇವಸ್ಥಾನದ ಬಳಿ ನಡೆದಿದೆ.
ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿಯ ಮಂಜುನಾಥ್ (21) ಮೃತಪಟ್ಟ ಯುವಕ. ಅತಿ ವೇಗವಾಗಿ ಬೈಕ್ ಓಡಿಸಿದ ಪರಿಣಾಮ ಬೈಕ್ ಆಯ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ. ಹೊನ್ನಾಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.