ನವದೆಹಲಿ: ಕಳೆದ ವರ್ಷದ ತೀವ್ರ ಮಳೆಕೊರತೆಯಿಂದ ಕಂಗೆಟ್ಟಿದ್ದ ರೈತರಿಗೆ ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಈ ವರ್ಷದ ವಾಡಿಕೆಯಂತೆ ಜೂನ್ ನಲ್ಲಿ ಮುಂಗಾರು ಮಳೆ ಶುರುವಾಗಿ ದೇಶದಾದ್ಯಂತ ಸಮೃದ್ಧ ಮಳೆ ತರಲಿದೆ ತಿಳಿಸಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಜೂನ್ನಿಂದ ಆರಂಭವಾಗುವ ಮುಂಗಾರು ದೇಶದಾದ್ಯಂತ ಉತ್ತಮ ಮಳೆಯಾಗಲಿದೆ. ಮೇ ತಿಂಗಳ ನಂತರ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ ಮತ್ತು ಲಾ ನಿನಾ ಪರಿಸ್ಥಿತಿಗಳ ಪ್ರಭಾವ ಕಡಿಮೆಯಾಗಲಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮುಂಬರುವ ಮುಂಗಾರು ಹಂಗಾಮಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಈ ಬೇಸಿಗೆಯಲ್ಲಿ ಎಲ್ ನಿನೋ ಪ್ರಭಾವ ತೀವ್ರವಾಗಿರುತ್ತದೆ. ಈಶಾನ್ಯ ಪೆನಿನ್ಸುಲರ್ ಇಂಡಿಯಾ, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಕರ್ನಾಟಕ, ಮಹಾರಾಷ್ಟ್ರ, ಒಡಿಶಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆಗಳು ಕಂಡುಬರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ ನಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಇದು ದೀರ್ಘಾವಧಿಯ ಸರಾಸರಿ 29.9 ಎಂಎಂನ 117 ಪ್ರತಿಶತಕ್ಕಿಂತ ಹೆಚ್ಚು. ಮತ್ತು ಮಾರ್ಚ್ ಮತ್ತು ಮೇ ನಡುವೆ, ದೇಶದ ಹೆಚ್ಚಿನ ಭಾಗಗಳು ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸುವ ಸಾಧ್ಯತೆಯಿದೆ. ಚಾಲ್ತಿಯಲ್ಲಿರುವ ಎಲ್ ನಿನೊ ಪರಿಸ್ಥಿತಿಗಳು ಬೇಸಿಗೆಯ ನಂತರ ತಟಸ್ಥವಾಗುವ ಸಾಧ್ಯತೆಯಿದೆ. ಇದರಿಂದ ಮುಂಗಾರು ಆರಂಭದಿಂದಲೇ ದೇಶದಾದ್ಯಂತ ಉತ್ತಮ ಮಳೆಯಾಗಲಿದೆ ಎಂದಿದ್ದಾರೆ.



