ದಾವಣಗೆರೆ; ಮೈಲಾರ ಕಾರ್ಣಿಕೋತ್ಸವ, ಉಚ್ಚಂಗಿದುರ್ಗ ಭರತ ಹುಣ್ಣಿಮೆಗೆ ದಾವಣಗೆರೆ ವಿಭಾಗದಿಂದ 175 ಕೆಎಸ್ ಆರ್ ಟಿಸಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.
ಮೈಲಾರ ಕಾರ್ಣಿಕೋತ್ಸವ ಫೆ.25 ರಿಂದ 27 ರವರೆಗೆ ಜರುಗಲಿದೆ. ಭಕ್ತರ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮವು ದಾವಣಗೆರೆ ವಿಭಾಗದ ಘಟಕಗಳಿಂದ 115 ಹೆಚ್ಚುವರಿ ವಿಶೇಷ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಇನ್ನೂ ಶ್ರೀಕ್ಷೇತ್ರ ಉಚ್ಚಂಗಿದುರ್ಗದ ಭರತ ಹುಣ್ಣಿಮೆ ಫೆ.23 ರಿಂದ 25 ರವರೆಗೆ ಜರುಗಲಿದೆ. ಭಕ್ತರ ಗಳ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮವು ದಾವಣಗೆರೆ ವಿಭಾಗದ ಘಟಕಗಳಿಂದ 60 ಹೆಚ್ಚುವರಿ ವಿಶೇಷ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.



