ದಾವಣಗೆರೆ: ನಗರದ ಪಿ.ಜೆ. ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ನಡೆಸುತ್ತಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಮೂವರು ಮಹಿಳೆಯರು ಹಾಗೂ ಒಬ್ಬ ಯುವತಿ ಸಿಕ್ಕಿಬಿದ್ದಿದ್ದಾರೆ.
ಪಿ.ಜೆ ಬಡಾವಣೆಯ ಉಮಾಪತಿ ಎಂಬುವವರಿಗೆ ಸೇರಿದ ಮನೆಯ ಇದ್ದಾಗಿದ್ದು, ಗಂಗಿಬಾಯಿ ಎಂಬುವವರು ಬಾಡಿಗೆ ಪಡೆದು ಈ ಕೃತ್ಯ ಎಸಗಿದ್ದರು. ಹೆಣ್ಣು ಮಕ್ಕಳನ್ನು ಹಣದ ಆಮಿಷ ಒಡ್ಡಿ ಬೇರೆ ಕಡೆಯಿಂದ ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇಲೆ ಈ ದಾಳಿ ನಡೆದಿದೆ.
ದಾವಣಗೆರೆ ಹಾಗೂ ಹರಪನಹಳ್ಳಿಯ ಮೂವರು ಮಹಿಳೆಯರು ಹಾಗೂ ಬೆಳಗಾವಿಯ ಒಬ್ಬರು ಯುವತಿ ವೇಶ್ಯಾವಾಟಿಕೆ ಕೃತ್ಯದಲ್ಲಿ ತೊಡಗಿದ್ದರು. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಹರಪನಹಳ್ಳಿಯ ಗಂಗಿಬಾಯಿ ವಿರುದ್ಧ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ.



