ದಾವಣಗೆರೆ: ಸೊಳ್ಳೆ ಓಡಿಸಲು ಹಚ್ಚಿದ್ದ ಸೊಳ್ಳೆ ಬತ್ತಿ ಕಿಡಿಯಿಂದ ಹೊತ್ತಿದ ಬೆಂಕಿಗೆ ವೃದ್ಧರೊಬ್ಬರು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದಲ್ಲಿ ನಡೆದಿದೆ.
ಎ.ಮಲ್ಲಪ್ಪ (85) ಮೃತಪಟ್ಟ ದುರ್ದೈವಿ. ರಾತ್ರಿ ಮಲಗುವಾಗ ಸೊಳ್ಳೆ ಕಾಟ ತಾಳಲಾರದೆ ಸೊಳ್ಳೆ ಬತ್ತಿ ಹಚ್ಚಿದ್ದರು. ಮಧ್ಯರಾತ್ರಿ ಆಕಸ್ಮಿಕ ಬೆಂಕಿ ತಾಗಿ ಬಟ್ಟೆಗೆ ಬೆಂಕಿ ಹತ್ತಿಕೊಂಡು ಉರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ವೃದ್ಧನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಸೇರಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಸಾವನ್ನಪ್ಪಿದ್ದಾರೆ.