Connect with us

Dvgsuddi Kannada | online news portal | Kannada news online

ಕ್ರೀಡಾಪಟುಗಳಿಗೆ ಬಂಪರ್​ ಆಫರ್​; ಒಲಂಪಿಕ್ ನಲ್ಲಿ ಚಿನ್ನ ಪದಕ ಗೆದ್ದವರಿಗೆ 6 ಕೋಟಿ ಬಹುಮಾನ ‌ಘೋಷಣೆ

IMG 20240216 122411

ಪ್ರಮುಖ ಸುದ್ದಿ

ಕ್ರೀಡಾಪಟುಗಳಿಗೆ ಬಂಪರ್​ ಆಫರ್​; ಒಲಂಪಿಕ್ ನಲ್ಲಿ ಚಿನ್ನ ಪದಕ ಗೆದ್ದವರಿಗೆ 6 ಕೋಟಿ ಬಹುಮಾನ ‌ಘೋಷಣೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕ್ರೀಡಾಪಟುಗಳಿಗೆ ಬಂಪರ್ ಆಫರ್ ನೀಡಿದ್ದಾರೆ. ಪ್ಯಾರಿಸ್ ಒಲಂಪಿಕ್ ನಲ್ಲಿ ಪದಕ ಗೆದ್ದವರಿಗೆ ಕೋಟಿ, ಕೋಟಿ ಬಹುಮಾನವನ್ನು ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ.

2024-25ರ ಕರ್ನಾಟಕ ಬಜೆಟ್​ನಲ್ಲಿ ಸಿಎಂ ಈ ಘೋಷಣೆ ಮಾಡಿದ್ದು, ಒಲಂಪಿಕ್​ನಲ್ಲಿ ಚಿನ್ನದ ಪದಕ ಗೆದ್ದವರಿಗೆ 6 ಕೋಟಿ ರೂಪಾಯಿ, ಬೆಳ್ಳಿ ಪದಕ ಗೆದ್ದವರಿಗೆ 4 ಕೋಟಿ ರೂಪಾಯಿ ಹಾಗೂ ಕಂಚಿನ ಪದಕ ಗೆದ್ದವರಿಗೆ 3 ಕೋಟಿ ಪ್ರೋತ್ಸಾಹ ಧನ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.

ಅಲ್ಲದೇ, ಕಾಮನ್ ವೆಲ್ತ್ ಗೇಮ್ ನಲ್ಲಿ ಪದಕ ಗೆದ್ದವರಿಗೂ ಪ್ರೋತ್ಸಾಹ ಧನ ಘೋಷಣೆ ಮಾಡಿದ್ದು, ಕಾಮನ್ ವೆಲ್ತ್ ಗೇಮ್ ನಲ್ಲಿ ಚಿನ್ನದ ಪದಕ ಗೆದ್ದವರಿಗೆ 35 ಲಕ್ಷ ರೂಪಾಯಿ, ಬೆಳ್ಳಿ ಪದಕ ಗೆದ್ದವರಿಗೆ 25 ಲಕ್ಷ ರೂಪಾಯಿ ಹಾಗೂ ಕಂಚಿನ ಪದಕ ಗೆದ್ದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಕಳೆದ ಸಾಲಿನ ಆಯವ್ಯಯದಲ್ಲಿ ಕ್ರೀಡಾಪಟುಗಳಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಹುದ್ದೆಗಳನ್ನು ಮೀಸಲಾಡಿಲಾಗುವುದೆಂದು ಘೋಷಿಸಲಾಗಿತ್ತು. ಪ್ರಸಕ್ತ ಸಾಲಿನಿಂದ ಇತರೆ ಇಲಾಖೆಗಳ ನೇಮಕಾತಿಯಲ್ಲೂ ಶೇಕಡಾ 2 ರಷ್ಟು ಹುದ್ದೆಗಳನ್ನು ಮೀಸಲಿಡಲಾಗುವುದು.

ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ಅಂದಾಜು 70 ಎಕರೆ ನಿವೇಶನದಲ್ಲಿ ಅತ್ಯಾಧುನಿಕ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಮ ಸಮುಚ್ಛಯವ ಒಳಗೊಂಡ ಕ್ರೀಡಾ ನಗರ ಸಾರ್ವಜನಿಕರ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ.

ರಾಜ್ಯದ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಒಟ್ಟಾರೆ 12 ಕೋಟಿ ರೂಪಾಯಿ ಅನುದಾನ ನೀಡಲಾಗುವುದು.ರಾಜ್ಯದ ಕ್ರೀಡಾಪಟುಗಳಿಗೆ ಅತ್ಯುನ್ನತ ಸ್ಪರ್ಧಾ ಅವಕಾಶ ಒದಗಿಸಲು ಪ್ರತಿ ವರ್ಷ ಒಂದು ರಾಜ್ಯ ಮಟ್ಟದ ಒಲಿಂಪಿಕ್ಸ್ ಮತ್ತು 14ವರ್ಷ ವಯೋಮಾನದ ಒಳಗಿನವರಿಗೆ ಮಿನಿ ಒಲಿಂಪಿಕ್ಸ್ ಅಯೋಜಿಸಲಾಗುವುದು.

ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸಮಯದಲ್ಲಿ ಗಾಯಗೊಂಡಲ್ಲಿ ಅವರ ಚಿಕಿತ್ಸೆಗೆ ನೆರವಾಗಲು ಆರೋಗ್ಯ ವಿಮೆ ಸೌಲಭ್ಯವನ್ನು ರಾಜ್ಯ ಸರ್ಕಾರದಿಂದ ಒದಗಿಸಲಾವುದು.

ರಾಜ್ಯದ 14 ಸ್ಥಳಗಳಲ್ಲಿ ಮುಂದಿನ ಎರಡು ವರ್ಷದೊಳಗೆ 35 ಕೋಟಿ ರೂಪಾಯಿ ವೆಚ್ಚದಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • astrology today astrology today

    ಪ್ರಮುಖ ಸುದ್ದಿ

    ಸೋಮವಾರದ ರಾಶಿ ಭವಿಷ್ಯ 04 ಆಗಸ್ಟ್ 2025

    By

    ಈ ರಾಶಿಯವರಿಗೆ ಜನ್ಮ ರಾಶಿಯಲ್ಲಿ ಶನಿ ಇದ್ದು ಅವಿವಾಹಿತರಿಗೆ ಮದುವೆ ವಿಳಂಬ, ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ವಿಚ್ಛೇದನ, ಉದ್ಯೋಗಿಸ್ತರಿಗೆ ತೊಂದರೆ, ಸೋಮವಾರದ...

  • astrology today astrology today

    ಪ್ರಮುಖ ಸುದ್ದಿ

    ಭಾನುವಾರದ ರಾಶಿ ಭವಿಷ್ಯ 03 ಆಗಸ್ಟ್ 2025

    By

    ಈ ರಾಶಿಯವರ ಕೊನೆಗೂ ಮದುವೆಯಾಯಿತು, ಈ ರಾಶಿಯವರ ಮಕ್ಕಳ ಸಂಕಷ್ಟ ಎದುರಾದ ಬಗ್ಗೆ ಚಿಂತನೆ, ಈ ರಾಶಿಯ ಕಮಿಷನ್ ಏಜೆಂಟ್ ವ್ಯವಹಾರಸ್ತರಿಗೆ...

  • astrology today astrology today

    ಪ್ರಮುಖ ಸುದ್ದಿ

    ಶನಿವಾರದ ರಾಶಿ ಭವಿಷ್ಯ 02 ಆಗಸ್ಟ್ 2025

    By

    ಈ ರಾಶಿಯವರಿಗೆ ಎಷ್ಟೇ ಪ್ರಯತ್ನಿಸದರೂ ಮದುವೆ ಯೋಗ ಬರುತ್ತಿಲ್ಲ, ಈ ರಾಶಿಯ ಸಿರಿ ಧಾನ್ಯ ವ್ಯಾಪಾರಿಸ್ತರಿಗೆ ಲಾಭ ಇಲ್ಲ, ಶನಿವಾರದ ರಾಶಿ...

  • astrology today astrology today

    ಪ್ರಮುಖ ಸುದ್ದಿ

    ಶುಕ್ರವಾರದ ರಾಶಿ ಭವಿಷ್ಯ 01 ಆಗಸ್ಟ್ 2025

    By

    ಈ ರಾಶಿಯವರು ಯೋಚಿಸಿರುವ ಕೆಲಸದಲ್ಲಿ ಜಯ, ಈ ರಾಶಿಯವರಿಗೆ ಸರಕಾರಿ ಉದ್ಯೋಗ ಪ್ರಾಪ್ತಿ, ಶುಕ್ರವಾರದ ರಾಶಿ ಭವಿಷ್ಯ 01 ಆಗಸ್ಟ್ 2025...

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 31 ಜುಲೈ 2025

    By

    ಈ ರಾಶಿಯವರಿಗೆ ಕುಟುಂಬ ಕಲಹಗಳಿಂದ ಮುಕ್ತಿ ಸಿಗುವುದು! ಈ ರಾಶಿಯವರು ಇಷ್ಟಪಟ್ಟವರ ಜೊತೆ ಮದುವೆ ಗ್ಯಾರಂಟಿ. ಗುರುವಾರದ ರಾಶಿ ಭವಿಷ್ಯ 31...

ದಾವಣಗೆರೆ

Advertisement
Advertisement Enter ad code here

Title

To Top