ಡಿವಿಜಿ ಸುದ್ದಿ, ಚನ್ನಗಿರಿ: ಕೋಗಲೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಂದು ಚುನಾವಣೆ ನಡೆಯಿತು. ಒಟ್ಟು 12 ಸ್ಥಾನಗಳಲ್ಲಿ 3 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕಯಾಗಿದ್ದು, ಉಳಿದ 9 ಸದಸ್ಯರಿಗೆ ಚುನಾವಣೆ ನಡೆಯಿತು.
ಈ ಚುನವಣೆಯಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಶಿವಕುಮಾರ್ ಎಸ್ . ಆರ್ , ಹೆಚ್. ಯು ಮಲ್ಲಿಕಾರ್ಜುನ, ಶಿವುಕುಮಾರ್ ಎಸ್. ಆರ್ , ವೀರಭದ್ರಪ್ಪ ಕೆ. ಜಿ , ಗುರುಮೂರ್ತಿ ಎಸ್ , ರವಿ ಗೌಡ್ರು ಕೆಬಿ ಹಾಗೂ ಸಾಮಾನ್ಯ ಮಹಿಳಾದಿಂದ ಸುವರ್ಣಮ್ಮ , ಬಿಸಿಎಂ ಅಭ್ಯರ್ಥಿಯಾಗಿ ಕುಂಟಿ ಈಶಪ್ಪ . ಪ.ಜಾತಿ ಎ.ಕೆ ಕರಿಯಪ್ಪ , ಪ.ಪಂಗಡದಿಂದ ವೀಣಾ ಕುಮಾರಿ ಟಿ.ಡಿ ವಿಜೇತರಾದರು.
ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ್ದ ಮಲ್ಲೇಶ್ ವಿಜೇತ ಅಭ್ಯಾರ್ಥಿಗಳನ್ನು ಗ್ರಾಮಸ್ಥರ ಎದುರು ಘೋಷಿಸಿದರು. ಈ ಸಂದರ್ಭದಲ್ಲಿ ಮಹಮದ್ ವಿನೂಸ್ , ವಿಜಯಕುಮಾರ್ , ಷಡಕ್ಷರಿ ವಿ.ಎಸ್ , ಮಂಜಪ್ಪ ಸಿಇ , ಜಗದೀಶ್ ಗೌಡ , ಹೆಚ್ ಆರ್ ವೀರಭದ್ರಪ್ಪ , ಶ್ಯಾಗಲೆ ವಿರೇಶ್ , ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.