ದಾವಣಗೆರೆ: ದೇವರ ಮುಂದೆ ಹಚ್ಚಿದ ದೀಪದ ಕಿಡಿಯಿಂದ ಇಡೀ ಮನೆ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ ಮನೆಯೊಂದರಲ್ಲಿ ನಡೆದಿದೆ.
ಈ ಘಟನೆ ನಿನ್ನೆ (ಜ.31) ರಾತ್ರಿ ನಡೆದಿದೆ.ಬಡಪ್ಪ ಅವರು ಕುಟುಂಬಸ್ಥರೊಂದಿಗೆ ಮನೆಗೆ ಬೀಗ ಹಾಕಿ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ದೀಪದಿಂದ ಆಕಸ್ಮಿಕವಾಗಿ ಬೆಂಕಿ ಕುಡಿಯಿಂದ ಇಡೀ ಮನೆ ಸುಟ್ಟು ಹೋಗಿದೆ. ಈ ಅವಘಡದಲ್ಲಿ ಮನೆಯಲ್ಲಿದ್ದ ಹಣ, ಚಿನ್ನಾಭರಣ, ಬಟ್ಟೆ, ದಾಖಲೆಗಳು ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ ಜಗಳೂರು ತಾಲೂಕು ದಂಡಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡದಿಂದ ಆದ ನಷ್ಟಕ್ಕೆ ಪರಿಹಾರ ನೀಡಲು ಬಡಪ್ಪ ಮನವಿ ಮಾಡಿದ್ದಾರೆ.



