ದಾವಣಗೆರೆ: ಆತನಿಗೆ ಇನ್ನೂ 24 ವರ್ಷ, ಈ ವಯಸ್ಸಿಗೇ ಎರಡು ಮದುವೆಯಾದ ಈ ಪಾಪಿ. ತನ್ನ ಪತ್ನಿಯನ್ನೇ ಕೊಂದು ಈಗ ಜೈಲಿನ ಕಂಬಿ ಎಣಿಸುತ್ತಿದ್ದಾನೆ. ಮೊದಲ ಮದುವೆ ನಂತರ ಕದ್ದುಮುಚ್ಚಿ ಎರಡನೇ ಮದುವೆಯಾದ ಈತ. ಒಮ್ಮೆ ಆ ಕಡೆ, ಇನ್ಮೊಮ್ಮೆ ಕಡೆ ಎನ್ನುತ್ತಿದ್ದ.. ಮೊದಲ ಪತ್ನಿ ಜೊತೆ ಸದಾ ಜಗಳ ನಡೆಯುತ್ತಿತ್ತು. ಆಗ ಎರಡನೇ ಹೆಂಡತಿಗಾಗಿ ಮೊದಲ ಪತ್ನಿಯನ್ನೇ ಕೊಲೆ ಮಾಡಿ, ದೇಹ ಚೀಲದಲ್ಲಿ ಕಟ್ಟಿ ಕೆರೆಗೆ ಎಸೆದ ಘಟನೆ ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಾಸಲುಹಳ್ಳ ಗ್ರಾಮದ ಕಾವ್ಯ(21) ಕೊಲೆಯಾಗಿರುವ ಗೃಹಿಣಿಯಾಗಿದ್ದಾಳೆ, ಈಕೆ ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ (24) ಎನ್ನುವನನ್ನು ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದಳ., ಅವರಿಗೆ ಒಂದು ಮಗು ಸಹ ಇತ್ತು. ಆದರೆ, ಸಚಿನ್ ದಾವಣಗೆರೆ ತಾಲ್ಲೂಕಿನ ಕಡ್ಲೆಬಾಳು ಗ್ರಾಮದ ನಿವಾಸಿ ಚೈತ್ರ ಹಿಂದೆ ಬಿದ್ದಿದ್ದ. ಆಕೆಯನ್ನು ಕೂಡ ಎರಡನೇ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದೆ. ಇನ್ನು ಇವರಿಬ್ಬರ ಸರಸಕ್ಕೆ ಕಾವ್ಯ ಅಡ್ಡಿಯಾದ ಹಿನ್ನಲೆ ಈಕೆಯನ್ನು ಕತ್ತು ಹಿಸುಕಿ ಸಾಯಿಸಿ ಗೋಣಿಚೀಲದಲ್ಲಿ ತುಂಬಿ ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಗೆ ತಂದು ಹಾಕಿ ಪರಾರಿಯಾಗಿದ್ದನು.
ಇತ್ತ ತಮ್ಮ ಮಗಳು ಕಾವ್ಯ ಇದ್ದಕ್ಕಿದ್ದಂತೆ ಕಾಣದೇ ಇರುವುದರಿಂದ ಆತಂಕಗೊಂಡ ಪಲಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅನುಮಾನಗೊಂಡ ಪೊಲೀಸರು ಗಂಡ ಸಚಿನ್ನನ್ನು ವಿಚಾರ ಮಾಡಿದಾಗ ಸತ್ಯಾಂಶ ಹೊರಬಂದಿದೆ. ಇನ್ನು ಕಾವ್ಯ ಕಳೆದ ಐದು ವರ್ಷ ಸಚಿನ್ ಜೊತೆ ಸಂಸಾರ ಮಾಡಿದ್ದು, ಇತ್ತೀಚಿಗೆ ಸದಾ ಜಳವಾಡುತ್ತಿದ್ದನು.. ಚೈತ್ರಳಾ ಜೊತೆಗಿನ ಸಂಬಂಧ ತಿಳಿಯುತ್ತಿದ್ದಂತೆ ಕಾವ್ಯ, ಜಗಳಮಾಡಿಕೊಂಡು ತನ್ನ ತವರು ಮನೆ ಸೇರಿದ್ದಳು. ಕಳೆದ ಜನವರಿ 6 ರಂದು ಆಕೆಯನ್ನು ತವರು ಮನೆಯಿಂದ ಕಾಗಳಗೆರೆ ಗ್ರಾಮಕ್ಕೆ ಕರೆತಂದಿದ್ದ. ಮತ್ತೆ ಜಗಳವಾಗುತ್ತಿದ್ದಂತೆ ಸಚಿನ್ ಹಾಗೂ ಚೈತ್ರ ಸೇರಿಕೊಂಡು ಕಾವ್ಯಾಳ ಕೊಲೆ ಮಾಡಿದ್ದನು.
ಮೃತ ದೇಹ ಇಲ್ಲಿಯೇ ಇದ್ದರೆ ನಮ್ಮ ಮೇಲೆ ಅನುಮಾನ ಬರುತ್ತೆ ಎಂದು ಗೋಣಿಚೀಲದಲ್ಲಿ ಹೆಣವನ್ನು ಹಾಕಿಕೊಂಡು ಕೊಡಗನೂರು ಕೆರೆಗೆ ತಂದು ಹಾಕಿದ್ದಾರೆ. ತವರು ಮನೆಯಿಂದ ಗಂಡನ ಮನೆಗೆ ಹೋದ ಮಗಳು ಕಾಣೆಯಾಗಿದ್ದರಿಂದ ಅನುಮಾನಗೊಂಡ ತವರುಮನೆಯವರು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೀಟ್ ಕೊಟ್ಟಿದ್ದಾರೆ. ಆಗ ಸಚಿನ್ನನ್ನು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.
ಯಾರಿಗೂ ಸುಳಿವು ಸಿಗದಂತೆ ಕೆರೆಗೆ ಎಸೆದ ಮೃತ ದೇಹವನ್ನು ಪೊಲೀಸರು 19 ದಿನದ ಬಳಿಕ ಕಾವ್ಯಾಳ ಶವ ಪತ್ತೆ ಮಾಡಿದ್ದಾರೆ. ಕೊಳತ ಸ್ಥಿತಿಯಲ್ಲಿರುವ ಕಾವ್ಯಾಳ ಮೃತದೇಹವನ್ನು ಮಾಯಕೊಂಡ ಠಾಣೆ ಪೊಲೀಸರು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ. ಕೊಲೆ ಆರೋಪಿಗಳಾದ ಸಚಿನ್ ಹಾಗೂ ಚೈತ್ರ ಈಗ ಜೈಲಿನ ಕಂಬಿ ಎಣಿಸುವಂತಾಗಿದೆ.



