ದಾವಣಗೆರೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಬಿಟ್ಟಿದ್ದು ಯಾವುದೇ ಎಫೆಕ್ಟ್ ಆಗಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ಸುದ್ದಿಗಾರ ಜೊತೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆಗ ಅವರಿಂದ ಏನೂ ಲಾಭ ಆಗಿರಲಿಲ್ಲ. ಅವರಿಂದ ಹೇಳಿಕೊಳ್ಳುವಂತ ಬದಲಾವಣೆ ಆಗಿರಲಿಲ್ಲ. ಈಗ ಬಿಜೆಪಿಗೆ ಹೋದರೂ ಏನೂ ಎಫೆಕ್ಟ್ ಆಗಲ್ಲ. ಅವರಿಂದ ಎಫೆಕ್ಟ್ ಆಗಿದ್ರೆ ವಿಧಾನಸಭಾ ಚುನಾವಣೆಯಲ್ಲಿ ಯಾಕೆ ಸೋಲುತ್ತಿದ್ದರು ಎಂದರು.
ಶೆಟ್ಟರ್ ಪಕ್ಷ ಬಿಟ್ಟಿದ್ದು ವೈಯುಕ್ತಿಕ. ಅವರು ನಮ್ಮ ಬೀಗರಾದ್ರೆ ಮನೆಯೊಳಗೆ ಇರುತ್ತಾರೆ. ಕಾಂಗ್ರೆಸ್ ಗೆ ತನ್ನದೇ ಆದಂತ ವೋಟ್ ಇವೆ. ಏನೂ ಹಾನಿಯಾಗಲ್ಲ. ಕಾಂಗ್ರೆಸ್ ಕಾರ್ಯಕರ್ತರೇ ಶಕ್ತಿ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಪ್ರತಿಷ್ಠಾಪನೆಯಿಂದ ಬಿಜೆಪಿಗೆ ಲಾಭ ಆಗಲ್ಲ. ನಾವೂ ಕೂಡ ರಾಮನಭಕ್ತರು. ಈ ವಿಚಾರ ಹಿಡಿದುಕೊಂಡು ಚುನಾವಣೆಗೆ ಹೋಗಲ್ಲ. ಜನರಿಗೆ ಮೊದಲು ಊಟ, ವಸತಿ, ಶಿಕ್ಷಣ ಬೇಕು ಅಗತ್ಯ ಎಂದರು.



