ದಾವಣಗೆರೆ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಜಾಲ ಪತ್ತೆ ಮಾಡಿದ್ದಾರೆ. ಪ್ರಕರಣದಲ್ಲಿ ದಾವಣಗೆರೆ ಸೇರಿ ವಿವಿಧ ಜಿಲ್ಲೆಯ 6 ಆರೋಪಿಗಳ ಬಂಧನ ಮಾಡಲಾಗಿದೆ. ಆರೋಪಿಗಳಿಂದ ನಕಲಿ ನೋಟುಗಳು ಹಾಗೂ ಪ್ರಿಂಟರ್ ವಶಕ್ಕೆ ಪಡೆಯಲಾಗಿದೆ.
500/- ಮತ್ತು ರೂ 200/- ಮುಖಬೆಲೆಯ ಒಟ್ಟು 7,07,700/- ಮೌಲ್ಯದ ಖೋಟಾನೋಟುಗಳು, ರೂ 500/- ಮುಖಬೆಲೆಯ ರೂ 43,000/- ಮೌಲ್ಯದ ಅಸಲಿ ನೋಟುಗಳು ಹಾಗೂ ಖೋಟಾನೋಟುಗಳನ್ನು ತಯಾರಿಸಲು ಉಪಯೋಗಿಸಿರುವ ಒಟ್ಟು ಅಂದಾಜು ರೂ 3,00,000/- ಮೌಲ್ಯದ ಲ್ಯಾಪ್ ಟಾಪ್ ಗಳು. ಕಲರ್ ಪ್ರಿಂಟರ್ ಗಳು, ಪೇಪರ್ ಕಟ್ಟರ್. ಕಲರ್ ಬಾಟಲಿಗಳು ಹಾಗೂ ಇತರೇ ಸಾಮಾಗ್ರಿ/ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜ.17ರಂದು ಬೆಳಿಗ್ಗೆ ಹರಿಹರ ತಾಲ್ಲೂಕು, ಹನಗವಾಡಿ ಗ್ರಾಮದ ಬಳಿ. ಸರ್ವೀಸ್ ರಸ್ತೆಯಲ್ಲಿ ಯಾರೋ ಇಬ್ಬರು ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ.ಎಂ. ಸಂತೋಷ, ಜಿ.ಮಂಜುನಾಥ್, ಹೆಚ್ಚುವರಿ ಡಿವೈಎಸ್ ಪಿ ಬಿ.ಎಸ್ ಬಸವರಾಜ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ಸಿ.ಪಿ.ಐ ಸುರೇಶ ಸಗರಿ, ಪಿ.ಎಸ್.ಐ ಅರವಿಂದ್ ಬಿ.ಎಸ್. ಅಬ್ದುಲ್ ಖಾದರ್ ಜಿಲಾನಿ ಹಾಗೂ ದಾವಣಗೆರೆ ಡಿ.ಸಿ.ಆರ್.ಬಿ ವಿಭಾಗದ ಮಜೀದ್, ಆಂಜನೇಯ, ರಾಘವೇಂದ್ರ, ರಮೇಶ್ ನಾಯ್ಕ, ಬಾಲರಾಜ್ ತಂಡವು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು:1) ತಳವಾರ ಕುಬೇರಪ್ಪ, 58 ವರ್ಷ, ಕುಕ್ಕವಾಡ, ದಾವಣಗೆರೆ ತಾಲ್ಲೂಕು 2) ಹರೀಶ © ಹರೀಶಗೌಡ, 29 ವರ್ಷ, ಐಗೂರು-ಲಿಂಗಾಪುರ, ದಾವಣಗೆರೆ ತಾಲ್ಲೂಕು
ಇವರನ್ನು ಹಿಡಿದು ಇವರಿಂದ ರೂ 500/- ಮುಖಬೆಲೆಯ ಒಟ್ಟು 37000/- ಮೌಲ್ಯದ ಖೋಟಾನೋಟುಗಳನ್ನು ಅಮಾನತ್ತುಪಡಿಸಿಕೊಂಡು ಇವರ ಮಾಹಿತಿ ಮೇರೆಗೆ ದಿನಾಂಕ:18/01/2024 ರಂದು ದಾವಣಗೆರೆ ಬಾಡಾ ಕ್ರಾಸ್ ಬಳಿ
3) ಜೆ.ರುದ್ರೇಶ, 39 ವರ್ಷ, ವಾಸ ದೊಡ್ಡಗೊಪ್ಪನಹಳ್ಳಿ, ಭದ್ರಾವತಿ ತಾಲ್ಲೂಕು ಮತ್ತು ಕೂರಗಳ್ಳಿ ಮೇಗಲ ಕೊಪ್ಪಲು, ಮೈಸೂರು
4) ಮನೋಜ್ ಗೌಡ, 21 ವರ್ಷ, ವಾಸ ಮಾಕನಹಳ್ಳಿ, ಬನ್ನೂರು ಹೋಬಳಿ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ
5) ಸಂದೀಪ, 30 ವರ್ಷ, ವಾಸ ಬೋರೆಕಲ್ಲಹಳ್ಳಿ, ಕೆ.ಆರ್ ನಗರ ತಾಲ್ಲೂಕು, ಮೈಸೂರು ಮತ್ತು ಕೃಷ್ಣರಾಜ ಸಾಗರ. ಮಂಡ್ಯ ಜಿಲ್ಲೆ
6) ಕೃಷ್ಣನಾಯ್ಕ ಬಿನ್, 28 ವರ್ಷ, ವಾಸ ಕಲ್ಕೆರೆ ಲಂಬಾಣಿ ಹಟ್ಟಿ, ಹೊಳಲ್ಕೆರೆ ತಾಲ್ಲೂಕು ಇವರನ್ನು ವಶಕ್ಕೆ ಪಡೆಯಲಾಗಿದೆ.
ಇವರಿಂದ ರೂ 500/- ಮುಖಬೆಲೆಯ ಒಟ್ಟು ರೂ 9000/- ಮುಖಬೆಲೆಯ ಖೋಟಾನೋಟುಗಳು. ಕೃತ್ಯಕ್ಕೆ ಉಪಯೋಗಿಸಿದ ರೂ 1,00,000/- ಬೆಲೆಯ KA1996554 ನೇ ಕಾರ್ ಹಾಗೂ ಖೋಟಾನೊಟುಗಳನ್ನು ತಯಾರಿಸಲು ಉಪಯೋಗಿಸಿದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದು, ದಿನಾಂಕ:19-01-2024 ರಂದು ಮೇಲ್ಕಂಡ 3 ಮತ್ತು 4 ನೇ ಆರೋಪಿತರು ಮಾಹಿತಿ ಮೇರೆಗೆ ಮೈಸೂರು, ಕೂರಗಳ್ಳಿ ಮೇಗಲ ಕೊಪ್ಪಲುವಿನಲ್ಲಿನ 3 ನೇ ಆರೋಪಿತನ ಬಾಡಿಗೆ ಮನೆಯಲ್ಲಿ ರೂ 500/- ಮತ್ತು ರೂ 200/- ಮುಖಬೆಲೆಯ ಒಟ್ಟು 7,07,700/- ಮೌಲ್ಯದ ಖೋಟಾನೋಟುಗಳು, ರೂ 500/- ಮುಖಬೆಲೆಯ ರೂ 43,000/- ಮೌಲ್ಯದ ಅಸಲಿ ನೋಟುಗಳು ಹಾಗೂ ಖೋಟಾನೋಟುಗಳನ್ನು ತಯಾರಿಸಲು ಉಪಯೋಗಿಸಿರುವ ಒಟ್ಟು ಅಂದಾಜು ರೂ 3,00,000/- ಮೌಲ್ಯದ ಲ್ಯಾಪ್ ಟಾಪ್ ಗಳು. ಕಲರ್ ಪ್ರಿಂಟರ್ ಗಳು, ಪೇಪರ್ ಕಟ್ಟರ್. ಕಲರ್ ಬಾಟಲಿಗಳು ಹಾಗೂ ಇತರೇ ಸಾಮಾಗ್ರಿ/ಉಪಕರಣಗಳನ್ನು ವಶಪಡಿಸಿಕೊಂಡಿದ್ದು, ಅಲ್ಲದೇ 500 ಮುಖ ಬೆಲೆಯ ಎರಡು ಬದಿ ಪ್ರಿಂಟ್ ಆಗಿರುವ 718 ಖೋಟಾ ನೋಟುಗಳು, 500 ಮುಖ ಬೆಲೆಯ ಒಂದು ಬದಿ ಪ್ರಿಂಟ್ ಆಗಿರುವ 570 ಖೋಟಾ ನೋಟುಗಳು, 200 ಮುಖ ಬೆಲೆಯ ಎರಡು ಬದಿ ಪ್ರಿಂಟ್ ಆಗಿರುವ 803 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಎ1 & ಎ2 ಆರೋಪಿಗಳ ಮೇಲೆ ಖೋಟಾ ನೋಟಿಗೆ ಸಂಬಂಧಿಸದಂತೆ ಈ ಹಿಂದೆ ಹರಿಹರ ಗ್ರಾಮಾಂತರ ಠಾಣೆಯ ಗುನ್ನೆ ನಂ : 128/2022 ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತವೆ. ಸದರಿ ಪ್ರಕರಣವನ್ನು ಬೇಧಿಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಬಹುಮಾನ ಘೋಷಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.