ದಾವಣಗೆರೆ: ನನ್ನನ್ನು ತೆಗೆಯಬೇಕೆಂದು ಕೆಲವರು ಕಾಯುತ್ತಿದ್ದು, ಕಾಲು ತೆಗೆಯಬೇಕು, ವಿಷ ಹಾಕಿ ಸಾಯಿಸಲು ಹೊಂಚು ಹಾಕುತ್ತಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ನನ್ನನ್ನು ತೆಗೆಯಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಕಾಲು ತೆಗೆಯಬೇಕು, ವಿಷ ಹಾಕಿ ಸಾಯಿಸಲು ಹೊಂಚು ಹಾಕುತ್ತಿದ್ದಾರೆ. ಅದ್ದರಿಂದ ನಾನು ಎಲ್ಲೇ ಹೋದರೂ ಎಚ್ಚರಿಕೆಯಿಂದ ಇರುತ್ತೇನೆ. ಯಾರು ಏನೇ ಕೊಟ್ಟರೂ ತಿನ್ನುವುದಿಲ್ಲ. ನನ್ನ ಸ್ನೇಹ ಬಳಗದಲ್ಲೇ ಈ ರೀತಿಯಾಗಿ ಹೊಂಚು ಹಾಕುತ್ತಿದ್ದಾರೆ ಎಂದರು.



