ದಾವಣಗೆರೆ: ಡಿಟಿಎಚ್ ರಿಜಾರ್ಚ್ ಮಾಡಲು ಬಂದ ಮೆಸೇಜ್ ಲಿಂಕ್ ಮೇಲೆ ಕ್ಲಿಕ್ ಮಾಡಿದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಬರೋಬ್ಬರಿ 82,998 ರೂಪಾಯಿ ಕಳೆದುಕೊಂಡಿದ್ದಾರೆ. ದಾವಣಗೆರೆ ನಗರದ ಪಿಜೆ ಬಡಾವಣೆಯ ಪೊಲೀಸ್ ಕಾನ್‌ಸ್ಟೆಬಲ್ ಬಸವರಾಜ ಬಾಗೇವಾಡಿ ಸೈಬರ್ ವಂಚನೆಗೆ ಒಳಗಾದವರು.
ಪೊಲೀಸ್ ಕಾನ್‌ಸ್ಟೆಬಲ್ ಬಸವರಾಜ್ ಡಿಟಿಎಚ್ ರಿಜಾರ್ಚ್ ಮಾಡಿಸುವ ಉದ್ದೇಶದಿಂದ ಪ್ಲಾನ್ ಗಾಗಿ ಸಾಮಾಜಿಕ ಜಾಲತಾಣದಲ್ಲಿ ಹುಡುಕುತ್ತಿದ್ದಾಗ ಡಿಟಿಎಚ್‌ನ ಮೊಬೈಲ್ ಸಂಖ್ಯೆ ಸಿಕ್ಕಿದೆ. ಆ ಸಂಖ್ಯೆಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿಯೊಬ್ಬ ಉತ್ತಮ ಯೋಜನೆ ಇದೆ ಎಂದು ನಂಬಿಸಿ ಲಿಂಕ್ ಓಪನ್ ಮಾಡಿ, ಅದರಲ್ಲಿ ಮಾಹಿತಿ ತುಂಬುವಂತೆ ತಿಳಿಸಿದ್ದಾನೆ.ಅಪರಿಚಿತ ವ್ಯಕ್ತಿಯ ಮಾತುಗಳಿಗೆ ಮರುಳಾದ ಬಸವರಾಜ್ ಹೇಳಿದಂತೆ ಮಾಹಿತಿ ತುಂಬಿದ್ದಾರೆ. ಈ ವೇಳೆ ಅವರ ಖಾತೆಯಿಂದ ಹಂತಹಂತವಾಗಿ ಒಟ್ಟು ಹಣ ಕಡಿತವಾಗಿದೆ. ತಕ್ಷಣ ಬಸವರಾಜ್ ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.