ದಾವಣಗೆರೆ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್ ಟಿಸಿ) ನಮ್ಮಕಾರ್ಗೋ ಟ್ರಕ್ ಸೇವೆಗೆ ಚಾಲನೆ ನೀಡಲಾಯಿತು.
ಪಿ.ಬಿ. ರಸ್ತೆಯಲ್ಲಿರುವ ಎಸ್.ಕೆ. ವೀರಭದ್ರಪ್ಪ ಅಂಡ್ ಕೋ ಅಂಗಡಿಯಿಂದ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಅಂಗಡಿಯ ಮಾಲೀಕ ಗಿರೀಶ್, ಕರ್ನಾಟಕ ರಾಜ್ಯ
ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ಶ್ರೀನಿವಾಸ ಮೂರ್ತಿ ಮತ್ತು ವಿಭಾಗಿಯ ತಾಂತ್ರಿಕ ಅಭಿಯಂತರ ವೆಂಕಟೇಶ್ ಮತ್ತು ವಿಭಾಗಿಯ ಸಂಚಾಲನಾಧಿಕಾರಿ ಫಕೃದ್ದೀನ್, ಘಟಕ ವ್ಯವಸ್ಥಾಪಕ ಶ್ರೀರಾಮಚಂದ್ರಪ್ಪ ನಮ್ಮ ಕಾರ್ಗೋ
ವಾಹನವನ್ನು ಕಳುಹಿಸಿಕೊಟ್ಟರು. ಅಂಗಡಿಯ ಮಾಲೀಕರು ವಾಹನದ ವೈಶಿಷ್ಟ್ಯಗಳ ಬಗ್ಗೆ ಸಂತಸ ವ್ಯಪಡಿಸಿದರು. ಇದೇ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ನಮ್ಮ ಕಾರ್ಗೋ ಸೇವೆಗೆ ಒತ್ತು ನೀಡಿ ಎಂದು ಮನವಿ ಮಾಡಿದರು.