ದಾವಣಗೆರೆ: ನಗರದ ಹೊರ ವಲಯದಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಬೈಕ್ ಹತ್ತಿದ ವ್ಯಕ್ತಿ, ಬೈಕ್ ನಿಲ್ಲಿಸುವಂತೆ ಹೇಳಿ ಚಾಕು ತೋರಿಸಿ ಸುಲಿಗೆ ನಡೆಸಿದ ಘಟನೆ ನಡೆದಿದೆ. ಈ ಪ್ರಕರಣ ನಡೆದ 5 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಆಜಾದ್ ನಗರದ ಆಲಿ ಹಸನ್ @ ಅಲಿ (20) ಬಂಧಿಸಲಾಗಿದೆ. ಆರೋಪಿಯಿಂದ 55 ಸಾವಿರ ಬೆಲೆ ಬಾಳುವ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ 80 ಸಾವಿರ ರೂ. ಬೆಲೆ ಬಾಳುವ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿ ಪತ್ತೆ ಕಾರ್ಯ ಮುಂದುವರೆದಿದೆ.
ಹರ್ಷಿತ್ ಎಸ್ (19) ಎಂಬ ವಿದ್ಯಾರ್ಥಿ ಜಿ.ಎಂ.ಐ.ಟಿ ಕಾಲೇಜ್ ಕಾಲೇಜಿನಲ್ಲಿ ಇಂಟರ್‌ನಲ್ ಎಕ್ಸಾಮ್ ಮುಗಿಸಿಕೊಂಡು ಬೈಕಿನಲ್ಲಿ ಬಸವರಾಜ್ ಮತ್ತು ಸ್ಟೀಫನ್ ಜೊತೆ ಕಾಲೇಜ್ ಗೇಟ್ ಬಳಿ ನಿಂತಿದ್ದರು. ಅದೇ ಕಾಲೇಜಿನ ಸೀನಿಯರ್ ಅಲಿ ಎಂಬುವವನು ಡ್ರಾಪ್ ಕೊಂಡು ಎಂದು ಕೇಳಿಕೊಂಡರು. ಕೀಯಾ ಷೋ ರೂಂ ಪಕ್ಕದ ಖಾಲಿ ಸೈಟ್ ಬಳಿ ಕರೆದುಕೊಂಡು ಹೋಗಿ ಬೈಕ್ ನಿಲ್ಲಿಸಲು ಹೇಳಿದ್ದು. ಬೈಕ್ ನಿಲ್ಲಿಸಿದ ತಕ್ಷಣ ರಸ್ತೆಯಲ್ಲಿದ್ದ ಗಿಡದ ಕೆಳಗೆ ಕೂತಿದ್ದ ಇನೊಬ್ಬ ವ್ಯಕ್ತಿ ತನ್ನ ಕೈಯಲ್ಲಿ ಚಾಕು ಹಿಡಿದುಕೊಂಡು ದುಡ್ಡುಕೊಡು ಎಂದು ಕೇಳಿದ್ದು. ನನ್ನ ಹತ್ತಿರ ಕ್ಯಾಷ್ ಇಲ್ಲ ಎಂದು ಹೇಳಿದಾಗ ಆ ವ್ಯಕ್ತಿಯು ಸ್ಟೀಫನ್ ಕೈನಲ್ಲಿದ್ದ ಮೊಬೈಲ್ ಕಿತ್ತುಕೊಂಡನು. ಕೊರಳಿನಲ್ಲಿದ್ದ 55 ಸಾವಿರ ಮೌಲ್ಯದ ಬಂಗಾರದ ಚೈನ್, ಬೆಲೆ ಬಾಳುವ 10 ಗ್ರಾಂ ತೂಕದ ಬಂಗಾರದ ಚೈನ್ ಬಲವಂತವಾಗಿ ಕಿತ್ತುಕೊಂಡು ಹೋದರು ಎಂದು ಹರ್ಷಿತ್ ದೂರು ನೀಡಿದ್ದರು.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ. ಸಿ. ಶೇತಸನದಿ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಿದ್ದು, ಈ ತಂಡವು ಕೃತ್ಯ ವರದಿಯಾದ 5 ಗಂಟೆಗಳಲ್ಲಿ ಆರೋಪಿ ಆಲಿ ಹಸನ್ ಬಂಧಿಸಲಾಗಿದೆ. ಆರೋಪಿ ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್. ಎಂ. ಸಂತೋಷ್, ಮಂಜುನಾಥ.ಜಿ ಶ್ಲಾಘಿಸಿದ್ದಾರೆ.



