ಡಿವಿಜಿ ಸುದ್ದಿ, ಮೈಸೂರು: ನಾನು ಡಿಸಿಎಂ ಸ್ಥಾನ ಕೇಳಿಲ್ಲ. ಮಂತ್ರಿ ಸ್ಥಾನ ಕೇಳಿದ್ದೇನೆ. ಈ ಸರ್ಕಾರಕ್ಕಾಗಿ ಕಳಂಕ ಹೊತ್ತಿದ್ದೇನೆ. ಹೀಗಾಗಿ ನನ್ನ ಹಿರಿತನ ಆಧಾರಿಸಿ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಬಿಜೆಪಿ ಮುಖಂಡ ಎಚ್.ವಿಶ್ವನಾಥ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

ಸುತ್ತೂರು ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಉಪ ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ದು ನಿಜ. ಆದರೆ, ಅವರು ಕೊಟ್ಟ ಮಾತು ಏನು ಎಂಬುದು ಅವರಿಗೆ ಗೊತ್ತಿದೆ. ಅದನ್ನು ಉಳಿಸಿಕೊಂಡರೆ ಸಾಕು. ಈ ಸರ್ಕಾರಕ್ಕಾಗಿ ಕಳಂಕ ಹೊತ್ತಿದ್ದೇನೆ. ಸೋತಿರುವ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ನಾನು ಡಿಸಿಎಂ ಸ್ಥಾನ ಕೇಳಿಲಲ್ಲ ಎಂದು ಶಾಸಕ ಎಸ್.ಟಿ ಸೋಮಶೇಖರ್ ವಿರುದ್ಧ ಕಿಡಿಕಾರಿದರು.
ಲೋಕಸಭೆಯಲ್ಲಿ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಸೋತಿದ್ದರು. ಅವರಿಗೆ ಸಚಿವ ಸ್ಥಾನ ನೀಡಿ ಅವರ ಅನುಭವ ಮತ್ತು ಹಿರಿಯತನ ಬಳಸಿಕೊಂಡಂತೆ ನನ್ನ, ಅನುಭವ ಬಳಕೆ ಮಾಡಿಕೊಳ್ಳಿ ಅಂತಾ ಹೇಳುವುದು ತಪ್ಪಾ ಎಂದರು.
ಉಪಚುನಾವಣೆಯಲ್ಲಿ ಸೋತಿರುವರಿಗೆ ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದಿದ್ದರು. ಕೆಲವರು ಸಿಎಂ ಬೇಡವೆಂದರೂ ಉಪ ಚುನಾವಣೆಯಲ್ಲಿ ನಿಂತು ಸೋತಿದ್ದಾರೆ. ಆರ್ . ಶಂಕರ್ ಯಡಿಯೂರಪ್ಪ ಮಾತಿನಂತೆ ನಡೆದುಕೊಂಡಿದ್ದಾರೆ. ಈಗ ಅವರಿಗೆ ಸಚಿವ ಸ್ಥಾನ ನೀಡುವುದು ಬಿಡುವುದು ಮುಖ್ಯಮಂತ್ರಿ ವಿಚೇಚನೆಗೆ ಬಿಟ್ಟ ವಿಚಾರ ಎಂದು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಶನಿವಾರ ಬೆಳಗ್ಗೆ ಸುತ್ತೂರಲ್ಲಿ ಹೇಳಿದ್ದರು



