ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 119 ಪೌರಕಾರ್ಮಿಕರ ಹುದ್ದೆಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಖಾಲಿ ಇರುವ ಒಟ್ಟು 1,433 ಪೌರ ಕಾರ್ಮಿಕ ಹುದ್ದೆ ಭರ್ತಿಗೆ ಸರ್ಕಾರ ಕರ್ನಾಟಕ ಆದೇಶ ಮಾಡಿದೆ. ಈ ಮೂಲಕ ದಾವಣಗೆರೆ ಮಹಾನಗರ ಪಾಲಿಕೆಯ ಸಂಖ್ಯಾತಿರಿಕ್ತ 119 ಹುದ್ದೆಗೆ ನೇಮಕಾತಿ ನಡೆಯಲಿದೆ.
ಅರ್ಹತೆ: ಕನ್ನಡ ಮಾತನಾಡಲು ಗೊತ್ತಿರಬೇಕು, ಪೌರಕಾರ್ಮಿಕರ ಹುದ್ದೆಯಲ್ಲಿ ಈಗಾಗಲೇ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆ, ಕನಿಷ್ಠ ವಯೋಮಿತಿ 18 ವರ್ಷ ಪೂರೈಸಿರಬೇಕು,ಗರಿಷ್ಠ ವಯಸ್ಸು 55 ವರ್ಷ ಆಗಿರಬೇಕು.
ಅರ್ಜಿ ಸಲ್ಲಿಕೆ: ನಿಗದಿತ ನಮೂನೆಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಸಂಬಂಧಪಟ್ಟ ಪೌರಾಯುಕ್ತರು / ಮುಖ್ಯಾಧಿಕಾರಿಗಳಿಂದ ದೃಢೀಕರಿಸಿ ಲಗತ್ತಿಸಬೇಕು. ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ನಿಗದಿತ ವಿಳಾಸಕ್ಕೆ ತಲುಪಿಸಬೇಕು. ವೇತನ; ವೇತನ ಶ್ರೇಣಿಯೂ ರೂ.17000-28950 ನಿಗದಿಪಡಿಸಲಾಗಿದೆ.ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-12-2023. ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-01-2024.ನಿಗದಿತ ಅರ್ಜಿ ನಮೂನೆ ಡೌನ್ಲೋಡ್ ಮಾಡಲು ಭೇಟಿ ನೀಡಬೇಕಾದ ವೆಬ್ಸೈಟ್ ವಿಳಾಸ : www.davanagerecity.mrc.gov.in
ಅರ್ಜಿ ಸಲ್ಲಿಸುವ ವಿಳಾಸ : ದಾವಣಗೆರೆ ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ರೈಲ್ವೆ ನಿಲ್ದಾಣ ಎದುರು, ಪಿ.ಬಿ ರಸ್ತೆ, ದಾವಣಗೆರೆ. ಅಭ್ಯರ್ಥಿಗಳು ಅಧಿಸೂಚನೆಗಾಗಿ ವೆಬ್ಸೈಟ್ www.davanagerecity.mrc.gov.in ಗೆ ಭೇಟಿ ನೀಡಿ. ಇಲ್ಲವೇ ಆಯಾ ನಗರಸಭೆ / ಪುರಸಭೆಗಳಲ್ಲಿ ಲಭ್ಯ ಇರಲಿದೆ.