ದಾವಣಗೆರೆ: ರಸ್ತೆ ಪಕ್ಕದಲ್ಲಿ ಹಾಕಿದ ಅಡಿಕೆ ಸಿಪ್ಪೆಗೆ ಹಚ್ಚಿದ ಬೆಂಕಿಯ ಹೊಗೆಯಿಂದ ರಸ್ತೆ ಕಾಣದಂತಾಗಿ ಬೈಕ್ ಸವಾರನಿಗೆ ಅಪಘಾತವಾಗಿದೆ. ಆಯಾ ತಪ್ಪಿ ಅಡಿಕೆ ಸಿಪ್ಪೆ ಬೆಂಕಿ ಮೇಲೆ ಬಿದ್ದ ಬೈಕ್ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಡಿದಿದೆ.
ಜಿಲ್ಲೆಯ ಚನ್ನಗಿರಿ- ದಾವಣಗೆರೆ ಮುಖ್ಯರಸ್ತೆಯ ಕಬ್ಬಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಸ್ತೆಯ ಪಕ್ಕದಲ್ಲಿ ಹಾಕಿರುವ ಅಡಿಕೆ ಸಿಪ್ಪೆ ಬೆಂಕಿಯ ಹೊಗೆಗೆ ರಸ್ತೆ ಕಾಣದಂತಾಗಿದೆ. ಎದುರಿಗೆ ಬರುವ ವಾಹನ ತಪ್ಪಿಸಲಿಕ್ಕೆ ಹೋಗಿ ಈ ಅಪಘಾತ ಸಂಭವಿಸಿದೆ. ಬೈಕ್ ಅಡಿಕೆ ಸಿಪ್ಪೆಯ ಬೆಂಕಿ ಮೇಲೆ ಬಿದ್ದಿದೆ. ಇದರಿಂದ ಬೈಕ್ ಸುಟ್ಟು ಕರಕಲಾಗಿದೆ. ಬೈಕ್ ಸವಾರ ಕಬ್ಬಳ ಗ್ರಾಮದ ಜಯಪ್ಪ (68) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೈಕ್ ಸವಾರನ ಕಾಲು, ಕೈಗಳಿಗೆ ಸುಟ್ಟು ಗಾಯಗಳಾಗಿವೆ. ಕೆರೆಬಿಳಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕತ್ಸೆಗೆ ದಾವಣಗೆರೆಗೆ ದಾಖಲಿಸಲಾಗಿದೆ. ಇನ್ನೂ ರಸ್ತೆ ಪಕ್ಕದಲ್ಲಿ ಅಡಿಕೆ ಸಿಪ್ಪೆ ಹಾಕಿದ ಅಡಿಕೆ ಖೇಣಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಸವಾಪಟ್ಟಣ ಪೊಲೀಸ್ ಠಾಣೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೂರು ನೀಡಿದ್ದಾರೆ.