ಡಿವಿಜಿ ಸುದ್ದಿ, ಚನ್ನಗಿರಿ: ಒಂದು ವರ್ಷದಿಂದ ನಿರೀಕ್ಷಿಸುತ್ತಿದ್ದ ಪರೀಕ್ಷೆಗಳು ಬಂದೆ ಎಂದಾಗ ವಿದ್ಯಾರ್ಥಿಗಳು ಸಂಭ್ರಮ, ಸಡಗರದಿಂದ ಆಚರಿಸಬೇಕು. ಯಾವುದೇ ಕಾರಣಕ್ಕೂ ಭಯಪಡದೆ ಸರಿಯಾದ ಅನುಕ್ರಮದಲ್ಲಿ ಪರೀಕ್ಷೆಯನ್ನು ಬರೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುನಾಥ್ ವಿಧ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲ್ಲೂಕಿನ ಹಿರೇ ಕೋಗಲೂರು ಗ್ರಾಮದಲ್ಲಿ ಪರೀಕ್ಷೆ ಒಂದು ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ಶಿಕ್ಷಕರು ಇಸ್ಮಾಯಿಲ್ ಮಾತನಾಡಿ , ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಿಗೆ ಪ್ರಮೋಷನ್ ಸಿಕ್ಕಂತೆ. ಪರೀಕ್ಷೆಯಲ್ಲಿ ಸಮಯದಲ್ಲಿ ಭಯಪಡುವುದು, ಗಾಬರಿಗೊಳ್ಳುವುದು, ನಿದ್ರೆ ಬಾರದಿರುವುದು, ಊಟ ಬಿಡುವುದನ್ನು ಮಾಡಬಾದರು.ಎಲ್ಲವನ್ನೂ ಓದಿಕೊಂಡಿರಬೇಕಾದರೆ ಭಯಪಡುವುದಾದರೂ ಏಕೆ? ಎಂದು ವಿಧ್ಯಾರ್ಥಿಗಳಿಗೆ ಪ್ರಶ್ನಿಸಿದರು.

ಜಿಲ್ಲಾದ್ಯಂತ ಸಂಚರಿಸಿ ವಿದ್ಯಾರ್ಥಿಗಳಿಗೆ ಪರಿಕ್ಷಾ ತರಬೇತಿ ನೀಡಿದ್ದೇನೆ. ನಾನು ವ್ಯಾಸಂಗ ಮಾಡಿದ ಶಾಲೆಯಲ್ಲಿ ಸಂಪನ್ಮೂಲ ವ್ಯೆಕ್ತಿಯಾಗಿ ನಿಮ್ಮಗಳ ಜೊತೆ ಸಂವಾದ ನಡೆಸುತ್ತಿರುವುದು ನನ್ನ ಪಾಲಿಗೆ ಅದೃಷ್ಟದ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಧನಂಜಯ ಮೂರ್ತಿ ವಹಿಸಿದ್ದರು. ಹಿರಿಯ ಸಹ ಶಿಕ್ಷಕರಾದ ಪ್ರಭಾಕರ್ ಎಂ. ಬಿ. ಸಹ ಶಿಕ್ಷಕರಾದ ಕುಬೇರಪ್ಪ ಬಿಯು , ಪ್ರದೀಪ್ ಕೆಬಿ . ಪ್ರಭಾಕರ್ ಬಿ ಎಸ್ , ಕೃಷ್ಣ ಹೆಚ್ , ಮಂಜುನಾಥ್ ಎಂ , ಜಗದೀಶ್ ಎಸಿ , ಮಲ್ಲೇಶಪ್ಪ, ಎಸ್ ಡಿಎಂಸಿ ಸದಸ್ಯರುಗಳು ಸೇರಿದಂತೆ ತಣಿಗೆರೆ , ಬೆಳ್ಳಿಗನೂಡು ಮತ್ತು ಸೋಮಲಾಪುರ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಉಪಸ್ಥಿತರಿದ್ದರು.



