ದಾವಣಗೆರೆ: ಶಿವಮೊಗ್ಗ ಡೈರಿಯಿಂದ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟಕ್ಕೆ 2015ರ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದು, ಕೂಡಲೇ ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಈ ವಿಚಾರದ ಬಗ್ಗೆ ಸರ್ಕಾರದ ಗಮನ ಸೆಳೆದರು. 8 ವರ್ಷಗಳ ಹಿಂದೆಯೇ ಆಗಿನ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಆದರೆ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟ ಇನ್ನೂ ಆರಂಭಿಸಿಲ್ಲ ಎಂದರು.
ಪ್ರತ್ಯೇಕ ಹಾಲು ಒಕ್ಕೂಟ ಆರ೦ಭಿಸಲು ಈಗಾಗಲೇ ದಾವಣಗೆರೆ ತಾಲ್ಲೂಕಿನ ಕಲ್ಪನಹಳ್ಳಿ ಗ್ರಾಮದಲ್ಲಿ ಜಮೀನು ಹಾಗೂ ರಸ್ತೆ
ಸಂಪರ್ಕಕಲ್ಪಿಸಿಕೊಟ್ಟಿದ್ದೇವೆ.ಇದಕ್ಕಾಗಿ ನಿಗಮ, ಮಂಡಳಿ ಸಹ ಸಮ್ಮತಿಸಿವೆ. ಹಾಗಾಗಿ ತಕ್ಷಣವೇ ತಮ್ಮ ಜಿಲ್ಲೆಗೆ ಪ್ರತ್ಯೇಕ ಹಾಕು ಒಕ್ಕೂಟ ಆರಂಭಿಸುವಂತೆ ಆಗ್ರಹಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆಯಾಗುತ್ತದೆ. ಅತೀ ಹೆಚ್ಚು ಸಹಕಾರ ಸಂಘಗಳೂ ನಮ್ಮ ಜಿಲ್ಲೆಯಲ್ಲಿವೆ. ರೈತರಿಗೂಅನುಕೂಲವಾಗುತ್ತದೆ. ವಿಶೇಷವಾಗಿ ರೈತಮಹಿಳೆಯರು, ಹೈನುಗಾರಿಕೆ ಅವಲಂಬಿತ ಕುಟುಂಬಗಳಿಗೂ ಆಸರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಪ್ರಥಮ ಆದ್ಯತೆ ಮೇಲೆ ದಾವಣಗೆರೆ-ಚಿತ್ರದುರ್ಗಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲಿ ಎಂದು ಆಗ್ರಹಿಸಿದರು.
ಶಾಸಕ ಮಾಯಕೊ೦ಡ ಕೆ.ಎಸ್.ಬಸವಂತಪ್ಪ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಂದಾಯ ಸಚಿವಕೃಷ್ಣ ಭೈರೇಗೌಡ, ಹಿಂದೆ ದಾವಣಗೆರೆ-ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸಲು ಕ್ರಮಬದ್ಧವಾಗಿ ಯಾವುದನ್ನೂ ಮಾಡಿಲ್ಲ. ಹಾಗಾಗಿ ಹಾಲು ಒಕ್ಕೂಟ ಆರಂಭಿಸಲು ಸಮಸ್ಯೆಯಾಗಿದೆ. ಇದೀಗ ಕೆಎಂಎಫ್‌ಗೆಪ್ರಸ್ತಾವ ಬಂದಿದ್ದು, ಆದಷ್ಟು ಬೇಗನೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.



