ನವದೆಹಲಿ: ಆಧಾರ್‌ಗೆ ಅರ್ಹತೆ ಹೊಂದಿರುವ ವ್ಯಕ್ತಿಯ ಬೆರಳಚ್ಚು ನೀಡಲು ಬೆರಳು ಇಲ್ಲದಿದ್ರೆ, ಕೇವಲ ಕಣ್ಣಿನ ಸ್ಕ್ಯಾನ್ ಮೂಲಕ ಆಧಾರ್‌ಗೆ ನೋಂದಣಿ ಮಾಡಬಹುದು ಎಂದು ಕೇಂದ್ರ ಸರಕಾರ ಘೋಷಿಸಿದೆ.
ಬೆರಳುಗಳು ಇಲ್ಲದ ಕೇರಳದ ಜೋಸಿಮೋಲ್ ಪಿ ಜೋಸ್ ಎಂಬ ಮಹಿಳೆ ಆಧಾರ್‌ಗೆ ನೋಂದಣಿ ವಿಚಾರದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಮಧ್ಯ ಪ್ರವೇಶಿಸಿ ಈ ಪ್ರಕಟಣೆ ಹೊರಡಿಸಿದ್ದಾರೆಆಧಾರ್‌ಗೆ ಅರ್ಹತೆ ಹೊಂದಿರುವ ವ್ಯಕ್ತಿಯ ಬೆರಳಚ್ಚು ಲಭ್ಯವಿಲ್ಲದಿದ್ದರೆ, ಕಣ್ಣಿನ ಸ್ಕ್ಯಾನ್ ಮೂಲಕ ಆಧಾರ್ ನೋಂದಣಿ ಮಾಡಬಹುದು. ಅದೇ ರೀತಿ, ಆಧಾರ್‌ಗೆ ಅರ್ಹತೆ ಹೊಂದಿರುವ ವ್ಯಕ್ತಿಗೆ ಯಾವುದೇ ಕಾರಣಕ್ಕೆ ಕಣ್ಣಿನ ಸ್ಕ್ಯಾನ್ ಸಾಧ್ಯವಿಲ್ಲದ ಸಂದರ್ಭದಲ್ಲಿ ಬೆರಳಚ್ಚು ಮೂಲಕ ಆಧಾರ್ ನೋಂದಣಿ ಮಾಡಬಹುದಾಗಿದ ಇದೇ ವೇಳ ಸರ್ಕಾರ ತಿಳಿಸಿದೆ.



