ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಹಿನ್ನೆಲೆ ತೀವ್ರ ಬರ ಆವರಿಸಿದೆ. ರಾಜ್ಯ ಸರ್ಕಾರವು ಕೂಡ 223 ತಾಲ್ಲೂಕುಗಳನ್ನು ತೀವ್ರ ಬರ ತಾಲ್ಲೂಕ್ ಗಳಾಗಿ ಘೋಷಿಸಿದೆ. ಬರ ಪರಿಹಾರ ಘೋಷಣೆ ಮಾಡುವಂತೆ ಪ್ರತಿಪಕ್ಷ ಮತ್ತು ರೈತ ಸಂಘಟನೆಯಿಂದ ಒತ್ತಡ ಹೇರಲಾಗಿದೆ. ಈ ಬೆನ್ನಲ್ಲೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದಿಂದ ಸರಕಾರದಿಂದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿರುವಾಗಲೇ ಪ್ರತಿ ರೈತನಿಗೆ 2000 ರೂಪಾಯಿವರೆಗೆ ನೆರವು ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿರುವ ಬರ ಪರಿಹಾರ 2000 ರೂಪಾಯಿ ಪಡೆಯುವ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ಯಾ..?; ಎಂದನ್ನು ತಿಳಿಯಲು ಈ ಲಿಂಕ್ ಮೂಲಕ ನಿಮ್ಮ ಮೊಬೈಲ್ ನಲ್ಲಿಯೇ ಆಧಾರ್ ನಂಬರ್ ಹಾಕಿ ..ಚೆಕ್ ಮಾಡಿಕೊಳ್ಳಿಬಹುದಾಗಿದೆ.
ಎನ್ಡಿಆರ್ಎಫ್ ಫಂಡ್ಗಾಗಿ ಕರ್ನಾಟಕದ ಮನವಿಗೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸದ್ಯಕ್ಕೆ ಅರ್ಹ ರೈತರಿಗೆ ಬರ ಪರಿಹಾರವಾಗಿ ತಲಾ ಎರಡು ಸಾವಿರ ರೂಪಾಯಿಯನ್ನು ನೀಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.ಮೊದಲ ಕಂತಾಗಿ ಸರಕಾರ ಪ್ರತಿ ರೈತರಿಗೆ 2 ಸಾವಿರ ರೂಪಾಯಿಯನ್ನು ಮುಂದಿನ ವಾರ ಅವರ ಖಾತೆಗೆ ಜಮಾ ಆಗಲಿದೆ. ಉಳಿದ ಹಣವನ್ನು ಕೇಂದ್ರದಿಂದ ಬಿಡುಗಡೆ ಮಾಡಿದ ನಂತರ ರೈತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸೆಪ್ಟೆಂಬರ್ನಲ್ಲಿ ರಾಜ್ಯ ಸರ್ಕಾರವು ಎನ್ಡಿಆರ್ಎಫ್ ನಿಧಿಯಡಿ ಬರ ಪರಿಹಾರಕ್ಕಾಗಿ 4,663 ಕೋಟಿ ರೂಪಾಯಿಗಳನ್ನು ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದೆ. ರಾಜ್ಯದಲ್ಲಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.
ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ಯಾ..? ನೀವೇ ಚೆಕ್ ಮಾಡಿಕೊಳ್ಳುವುದು ಹೇಗೆ..?
- ಮೊದಲಿಗೆ ನೀವು https://parihara.karnataka.gov.in/service87/?utm_source=DH-MoreFromPub&utm_medium=DH-app&utm_campaign=DH ವೆಬ್ಸೈಟ್ಗೆ ಭೇಟಿ ನೀಡಿ.
- ನಂತರ ನಿಮಗೆ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ವರ್ಷ, ಸೀಸನ್, calamity type ಎಂದು ಕಾಣಿಸಲಿದೆ. ಅಲ್ಲಿ ಆಯ್ಕೆಯನ್ನು ಮಾಡಿಕೊಳ್ಳಿ.
- ಸೀಸನ್ನಲ್ಲಿ ಖಾರಿಫ್ ಮತ್ತು calamity type ನಲ್ಲಿ Flood ಆಯ್ಕೆ ಮಾಡಿ. ಅದಾದ ಬಳಿಕ Get report ಮೇಲೆ ಕ್ಲಿಕ್ ಮಾಡಿ.
- ಇದಾದ ನಂತರ ಪುಟದಲ್ಲಿ ಯಾವ ರೈತರಿಗೆ ಬರ ಪರಿಹಾರದ ಮೊತ್ತ ಲಭ್ಯವಾಗಲಿದೆ ಎಂಬ ಮಾಹಿತಿ ಸಿಗಲಿದೆ.
ಇನ್ನೂ ಹಣ ಜಮೆಯಾಗಿದೆಯಾ?, ಹೀಗೆ ಚೆಕ್ ಮಾಡಲು
- https://landrecords.karnataka.gov.in/PariharaPayment/?utm_source=DH-MoreFromPub&utm_medium=DH-app&utm_campaign=DH ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಆಧಾರ್ ಸಂಖ್ಯೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ calamity type drough ಎಂದು ಆಯ್ಕೆ ಮಾಡಿ, ವರ್ಷ 2022-23 ಎಂದು ಆಯ್ಕೆ ಮಾಡಿ
- ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಭರ್ತಿ ಮಾಡಿ. ವಿವರಗಳನ್ನು ಪಡೆಯಲು ಎಂಬ ಆಯ್ಕೆ ಕ್ಲಿಕ್ ಮಾಡಿದರೆ ಬರ ಪರಿಹಾರದ ಸ್ಟೇಟಸ್ ಲಭ್ಯವಾಗಲಿದೆ.



