ದಾವಣಗೆರೆ: ಜಿಲ್ಲಾ ಪೊಲೀಸ್ ವತಿಯಿಂದ ಡಿ.05 ರಂದು ನಗರದ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕವಾಯತು ಮೈದಾನದಲ್ಲಿ“ನಾಗರಿಕ ಬಂದೂಕು ತರಬೇತಿ ಶಿಬಿರ”ವನ್ನು ಆಯೋಜಿಸಿದೆ.
ಆಸಕ್ತ ನಾಗರಿಕರು ನಿಮ್ಮ ಹತ್ತಿರದ ಠಾಣೆಗಳನ್ನು ಸಂಪರ್ಕಿಸಿ ಅಖಿತ ಮನವಿಗಳನ್ನು, ಪೂರಕ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅರ್ಜಿಗಳನ್ನು ದಿನಾಂಕ:04-12-2023ರೊಳಗೆ ಪರಿಶೀಲನಾ ಠಾಣಾ ಪೊಲೀಸ್ ಉಪಾಧೀಕ್ಷಕರು, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಪಿ ಜೆ ಬಡಾವಣೆ, ದಾವಣಗೆರೆ ಇವರಲ್ಲಿ ಸಲ್ಲಿಸಲು ಸೂಚಿಸಿದೆ. ನಿಗದಿತ ದಿನಾಂಕದ
ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-272005 ಸಂಪರ್ಕಿಸಬಹುದು.



