ಡಿವಿಜಿ ಸುದ್ದಿ, ಚನ್ನಗಿರಿ: ಪರೀಕ್ಷಾ ಪೂರ್ವ ಸಿದ್ದತೆಯಲ್ಲಿ ವೈಯುಕ್ತಿಕ ಅಧ್ಯಯನ ಮುಖ್ಯವಾಗಿದ್ದು, ಈ ಮೂಲಕ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕು ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಜೋಳದಾಳ್ ಸಹಯೋಗದೊಂದಿಗೆ ಜೋಳದಾಳ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಾವಿನಕಟ್ಟೆ, ಅಜ್ಜಿಹಳ್ಳಿ. ಬಿ ಆರ್ ಟಿ ಕಾಲೋನಿ ಎಸ್ ಎಸ್ ಎಲ್ ಸಿ ವಿದ್ಶಾರ್ಥಿಗಳಿಗೆ ಪರೀಕ್ಷೆ ‘ಒಂದು ಹಬ್ಬ ಸಂಭ್ರಮಿಸೋಣ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಏಕಾಗ್ರತೆ , ಬರೆಯುವ ತಂತ್ರ , ಪರೀಕ್ಷಾ ಕೌಶಲ್ಯ, ದೈಹಿಕ ಆರೋಗ್ಯ , ಆಹಾರ , ಈ ಎಲ್ಲವನ್ನೂ ಪರೀಕ್ಷಾ ಪೂರ್ವ ಸಿದ್ದತೆಯಲ್ಲೆ ನೀಗಿಸಿಕೊಳ್ಳಬೇಕು. ಈ ಬಾರಿ ಮಾವಿನಕಟ್ಟೆ ಕೇಂದ್ರದಲ್ಲಿ ನಾಲ್ಕು ಶಾಲೆಯ ವಿದ್ಶಾರ್ಥಿಗಳು ಶೇ.100 ರಷ್ಟು ಫಲಿತಾಂಶ ಬರಬೇಕು ಎಂದು ಹಾರೈಸಿದರು.
ಸಭೆಯ ಅಧ್ಶಕ್ಷತೆಯನ್ನು ಶಂಕರಪ್ಪ ಎಸ್ ವಹಿಸಿ ಹಬ್ಬದ ಕವನ ವಾಚನ ಮಾಡಿದರ. ಸಭೆಯಲ್ಲಿ ಗ್ರಾ.ಪಂ ಸದಸ್ಯ ಶಿವಕುಮಾರ್ ತಳವಾರ್ , ಎಸ್ ಡಿ ಎಂ ಸಿ ಅಧ್ಶಕ್ಷ ನಾಗರಾಜ್ ವಿ, ಮುಖ್ಯ ಶಿಕ್ಷಕ ನಾಗರಾಜ್, ಇಸಿಒ ಸಂಪನ್ಮೂಲ ಶಿಕ್ಷಕರಾದ ರಮೇಶ್ ,ರೂಪ , ಗೀತಾ ಎಸ್. ಶಂಕರಪ್ಪ, ಶಿಕ್ಷಕರಾದ ಸಿ.ಅಂಜನಪ್ಪ, ನಾಗರಾಜ್ ಓ. ಎಸ್, ಧನಂಜಯ್ ಭಾಗವಹಿಸಿದ್ದರು. ನಿರೂಪಣೆಯನ್ನು ಮಾಲತೇಶ್ ನಿರ್ವಹಿಸಿದರು. ಸ್ವಾಗತವನ್ನು ರೇಖಾ ಎಂ, ವಂದನೆಯನ್ನು ಸಂಗ್ಶಾನಾಯ್ಕ್ ನೆರವೇರಿಸಿದರು.