ನವದೆಹಲಿ: ಕೇಂದ್ರ ಸರ್ಕಾರದ ಸಂವಹನ ಸಚಿವಾಲಯದ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರು ಪೋಸ್ಟಲ್ ಅಸಿಸ್ಟೆಂಟ್, ಪೋಸ್ಟ್ ಮ್ಯಾನ್ ಸೇರಿ ವಿವಿಧ 1,899 ಹುದ್ದೆ ಭರ್ತುಗೆ ಅರ್ಜಿ ಆಹ್ವಾನಿಸಿದೆ.
ಅರ್ಹ ಅಭ್ಯರ್ಥಿಗಳು https://dopsportsrecruitment.cept.gov.in ಅಧಿಕೃತ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ನೋಂದಣಿ ಪ್ರಕ್ರಿಯೆ ನವೆಂಬರ್ 10 ರಿಂದಪ್ರಾರಂಭವಾಗುದ್ದು, ಡಿಸೆಂಬರ್ 9ರಂದು ಕೊನೆಗೊಳ್ಳುತ್ತದೆ. ತಿದ್ದುಪಡಿ ವಿಂಡೋ ಡಿಸೆಂಬರ್ 10 ರಂದು ತೆರೆಯುತ್ತದೆ ಮತ್ತು ಡಿಸೆಂಬರ್ 14, 2023 ರಂದು ಕೊನೆಗೊಳ್ಳುತ್ತದೆ.
- ಹುದ್ದೆ ವಿವರ
- ಪೋಸ್ಟಲ್ ಅಸಿಸ್ಟೆಂಟ್: 598
- ಸಾರ್ಟಿಂಗ್ ಅಸಿಸ್ಟೆಂಟ್: 143
- ಪೋಸ್ಟ್ ಮ್ಯಾನ್: 585
ಮೇಲ್ ಗಾರ್ಡ್: 3
ಮಲ್ಟಿ ಟಾಸ್ಕಿಂಗ್ ಸ್ಟಾಫ್: 570
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವೆವ್ ಸೈಟ್ ನಲ್ಲಿ ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು. ಅಧಿಕೃತ ವೆಬ್ ಸೈಟ್ https://dopsportsrecruitment.cept.gov.in ಗೆ ಭೇಟಿ ನೀಡಿ, ಆನ್ ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ಕರ್ನಾಟಕ ರಾಜ್ಯದಲ್ಲಿ 94 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅರ್ಜಿ ಶುಲ್ಕ: 100 ರೂ. ಮಹಿಳಾ ಅಭ್ಯರ್ಥಿಗಳು, ತೃತೀಯ ಲಿಂಗಿ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ), ಬೆಂಚ್ಮಾರ್ಕ್ ಅಂಗವಿಕಲರು (ಪಿಡಬ್ಲ್ಯೂಬಿಡಿ) ಮತ್ತು ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್) ಗೆ ಸೇರಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ / ಡೆಬಿಟ್ ಕಾರ್ಡ್ ಇತ್ಯಾದಿಗಳ ಮೂಲಕ ಆನ್ ಲೈನ್ ನಲ್ಲಿ ಪಾವತಿಸಬಹುದು. ಅಭ್ಯರ್ಥಿಗಳು, 10 ಮತ್ತು 12ನೇ ತರಗತಿ ಪಾಸ್ ಆಗಿರಬೇಕು.



