ಬೆಂಗಳೂರು: ಕೃಷಿ ಭೂಮಿ ಖಾತೆ ಮತ್ತು ಪೋಡಿ ಮಾಡಿಕೊಡಲು 28 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, 3.5 ಲಕ್ಷ ಕ್ಯಾಶ್ ಪಡೆಯುವಾಗ ರೆಡ್ ಹ್ಯಾಡ್ ಆಗಿ ದಾಸನಪುರದ ಕಂದಾಯ ನಿರೀಕ್ಷಕ (RI) ಮತ್ತು ಮತ್ತು ಆತನ ಆಪ್ತನನ್ನು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ನಗರ ಲೋಕಾಯುಕ್ತ ಎಸ್‍ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ದಾಳಿ ನಡೆದಿದೆ. ಬಂಧಿತ ಕಂದಾಯ ನಿರೀಕ್ಷಕನನ್ನು ವಸಂತ್ ಎಂದು ಗುರುತಿಸಲಾಗಿದೆ. ವಸಂತ್ 3.5 ಲಕ್ಷ ರೂ. ನಗದು ಹಾಗೂ 4 ಲಕ್ಷ ಚೆಕ್ ರೂಪದಲ್ಲಿ ಲಂಚ ಪಡೆದಿದ್ದ ಎಂದು ತಿಳಿದುಬಂದಿದೆ.ಕಂದಾಯ ನಿರೀಕ್ಷಕ ವಸಂತ್ ಅವರು ಬೆಟ್ಟಸ್ವಾಮಿ ಗೌಡ ಎಂಬುವವರಿಗೆ ಖಾತೆ ಮತ್ತು ಪೋಡಿ ಮಾಡಿ ಕೊಡಲು 28 ಲಕ್ಷ ರೂ ಹಣಕ್ಕೆ ಬೇಡಿಕೆಯಿಟ್ಟಿದ್ದ. ಇದರಲ್ಲಿ ಮೊದಲೇ ಚೆಕ್ ರೂಪದಲ್ಲಿ 4 ಲಕ್ಷ ರೂ. ಹಣವನ್ನು ಪಡೆದಿದ್ದ. ಬಳಿಕ ಬುಧವಾರ ಖಾಸಗಿ ಹೋಟೆಲ್‍ನಲ್ಲಿ 3.5 ಲಕ್ಷ ರೂ. ಪಡೆಯುತ್ತಿದ್ದಾಗ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು ವಸಂತ್ ಹಾಗೂ ಆತನ ಆಪ್ತನನ್ನು ರೆಡ್‍ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಯು ಹಣವನ್ನು ಮನೆಯಲ್ಲಿ ಇಟ್ಟಿರುವುದಾಗಿ ಹೇಳಿದ್ದು,ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿ 9 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದು ವಿಚಾರಣೆ ಮುಂದುವರೆದಿದ್ದಾರೆ.