ಡಿವಿಜಿಸುದ್ದಿ.ಕಾಂ, ದಾವಣಗೆರೆ : ಸಂಚಾರಿ ಮದ್ಯ ಮಾರಾಟದ ಕುರಿತು ಅಬಕಾರಿ ಸಚಿವರು ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಶಾಸಕ ರೇಣುಕಾಚಾರ್ಯ ತಾಕೀತು ಮಾಡಿದರು.
ಯಾವುದಾದ್ರು ತೀರ್ಮಾನ ತೆಗೆದುಕೊಳ್ಳುವಾಗ ಒಮ್ಮೆ ಯೋಚಿಸಿ. ನಿಮಗೆ ಅಧಿಕಾರ ಇದೆ ಎಂದು ಹೇಗೆ ಬೇಕೋ ಹಾಗೆ ನಿರ್ಧಾರ ತೆಗೆದುಕೊಳ್ಳವುದಲ್ಲ. ನಿಮ್ಮ ಈ ನಿರ್ಧಾರದಿಂದ ಸರ್ಕಾರಕ್ಕೆ ಮುಜುಗರವಾಗುತ್ತದೆ ಎಂದು ಹೊನ್ನಾಳಿಯಲ್ಲಿ ಹೇಳಿದರು.
ಸರ್ಕಾರ ಕುಡುರನ್ನು ಪ್ರೋತ್ಸಾಹಿಸಬಾರದು ಮತ್ತು ಕುಡಿಯುವವರ ಸಂಖ್ಯೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡಬಾರದು. ಕುಡಿಯುವವರ ಸಂಖ್ಯೆಯನ್ನು ತಗ್ಗಿಸಲು ಮನವೊಲಿಸುವ ಕೆಲಸ ಮಾಡಬೇಕು. ನಿಮಗೆ ಎಲ್ಲಾ ತಳಸಮುದಾಯದ ಸಾಮಾಜಿಕ ಸ್ಥಿತಿಗತಿ ಗೊತ್ತಿದೆ. ಇಂತಹ ಹೇಳಿಕೆಗಳನ್ನು ಕೊಟ್ಟು ಸರ್ಕಾರಕ್ಕೆ ಮುಜುಗರವುಂಟು ಮಾಡಬೇಡಿ ಎಂದರು.
ಮುಖ್ಯಮಂತ್ರಿಗಳು ಹಿರಿಯರಿದ್ದು ಅನುಭವಿಗಳಿದ್ದಾರೆ. ಇಂತಹ ಹೇಳಿಕೆ ಕೊಡುವ ಮುನ್ನ ಅವರೊಂದಿಗೆ ಚರ್ಚಿಸಬೇಕು.
ಎಂದು ಕಿವಿ ಮಾತು ಹೇಳಿದರು.



