ದಾವಣಗೆರೆ; ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮದುವೆ ಕಾರ್ಯಕ್ಕೆ ಬಂದಿದ್ದ ಯುವತಿಯರ ಚಿನ್ನಾಭರಣ ಕಳ್ಳತನ ಮಾಡಿದ ಒಬ್ಬರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 1.80 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆಯಲಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಇಂಜಿನೀಯರ್ ಶಿರೀಷ ಎನ್ (24) ಸ್ನೇಹಿತೆಯಾದ ಹರ್ಷಿತ ಮದುವೆಗೆ ನಗರದ ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಬ್ಯಾಕ್ ಸಮುದಾಯ ಭವನಕ್ಕೆ ಬಂದಿದ್ದರು. ಉಳಿದುಕೊಳ್ಳಲು ರೂಂ ನಂ:101ರಲ್ಲಿ ವ್ಯವಸ್ಥೆ ಮಾಡಿದ್ದು. ರೂಮಿನಲ್ಲಿ ಬ್ಯಾಗ್ ಇಟ್ಟು ಮದುವೆ ಕಾರ್ಯಕ್ರಮದಲ್ಲಿರುವಾಗ ಯಾರೋ ಕಳ್ಳರು ಬ್ಯಾಗಿನಲ್ಲಿದ್ದ ನನ್ನ ಅಂದಾಜು 1,30, 000 ರೂ ಬೆಲೆ ಬಾಳುವ 25 ಗ್ರಾಂ ತೂಕದ ಡಾಲರ್ ಇರುವ ಬಂಗಾರದ ಚೈನ್ , ಸ್ನೇಹಿತೆ ಅಂಕಿತ ಅಂದಾಜು 18,000ರೂ. ಬೆಲೆ ಬಾಳುವ 03 ಗ್ರಾಂ ಬಂಗಾರದ ಓಲೆ ಹಾಗೂ ಸ್ನೇಹಿತೆ ಸ್ವಾತಿಯ 18,000 ರೂ. ಬೆಲೆ ಬಾಳುವ 3 ಗ್ರಾಂ ಬಂಗಾರದ ಓಲೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ವಿದ್ಯಾನಗರ ಪೊಲೀಸರು ಆರೋಪಿ ಬಂಧಿಸಿದ್ದಾರೆ. ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ ಸಂತೋಷ್ ಹಾಗೂ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ.ಸಿ.ಶೇತ ಸನದಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಆರೋಪಿ ಕಿರಣ್ ನಾಯ್ಕ ಆರ್ (26), ಮಸಾಲೆ ವ್ಯಾಪಾರ, ವಾಸ- ದಾವಣಗೆರೆ ಈತನನ್ನು ಪತ್ತೆ ಮಾಡಿ ಆರೋಪಿತನಿಂದ ಕಳ್ಳತನ ಮಾಡಿದ್ದ ಒಟ್ಟು 1,80,000 ರೂ. ಬೆಲೆ ಬಾಳುವ 32 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು. ಆರೋಪಿತನ ಮೇಲೆ ದಾವಣಗೆರೆ ನಗರದ ವಿದ್ಯಾನಗರ, ಗಾಂಧಿನಗರ, ಬಸವನಗರ ಹಾಗೂ ಬಡಾವಣೆ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು ಅಲ್ಲದೇ ಪೊಲೀಸರು ಹಲವು ಬಾರಿ ಸದರಿ ಆರೋಪಿತನನ್ನು ದಸ್ತಗಿರಿ ಮಾಡಿದ್ದು, ವಾರೆಂಟ್ ಜಾರಿಯಾಗಿರುತ್ತದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



