ದಾವಣಗೆರೆ: ಫಸಲಿಗೆ ಬಂದ 450 ಅಡಿಕೆ ಮರಗಳು ಒಣಗುವಂತೆ ಬುಡಕ್ಕೆ ದುಷ್ಕರ್ಮಿಗಳು ಕಳೆನಾಶಕ ರೌಂಡಾಪ್ ಇಟ್ಟ ಘಟನೆ ನಡದಿದೆ. ದಾವಣಗೆರೆ ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದ ಮಸೀದಿಗೆ ಸೇರಿದ ತೋಟದಲ್ಲಿ ಈ ಕೃತ್ಯ ನಡೆದಿದೆ.
ಮಸೀದಿಗೆ ಸೇರಿದ ಸ್ಥಳದಲ್ಲಿ ಸಂಗಾಹಳ್ಳಿ ಬಷೀರ್ ಸಾಬ್ ಎಂಬುವವರು 2 ಎಕರೆ ಭೂಮಿಯಲ್ಲಿ 1,000 ಮರಗಳಿದ್ದವು. ಫಸಲಿಗೆ ಬಂದ 450 ಅಡಿಕೆ ಮರಗಳಿಗೆ ಮಚ್ಚಿನಿಂದ ಬುಡಕ್ಕೆ ಕಚ್ಚು ಹಾಕಿ ರೌಂಡಾಪ್ ಔಷಧಿ ಸಿಂಪಡಿಸಿದ್ದು, ಅಡಿಕೆ ಮರಗಳು ಒಣಗಿ ನಿಂತಿವೆ. ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



