ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನಲ್ಲಿ 1,720 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು IOCL ನ ಅಧಿಕೃತ ವೆಬ್‌ಸೈಟ್ iocl.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ನೋಂದಣಿ ಅಕ್ಟೋಬರ್ 21 ರಂದು ಪ್ರಾರಂಭವಾಗಿದೆ. ನವೆಂಬರ್ 20 ರಂದು ಕೊನೆ ದಿನವಾಗಿದೆ. ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವವರು 12 ನೇ ತರಗತಿ / ಪದವೀಧರ / ಡಿಪ್ಲೊಮಾ ಹೊಂದಿರುವವರಾಗಿದ್ದು, ಮಾನ್ಯತೆ ಪಡೆದ ಬೋರ್ಡ್ / ವಿಶ್ವವಿದ್ಯಾನಿಲಯ / ಸಂಸ್ಥೆಯಿಂದ ಸಂಬಂಧಿತ ವ್ಯಾಪಾರ / ವಿಭಾಗದಲ್ಲಿ ನಿಯತ ಪೂರ್ಣ ಸಮಯದ ಕೋರ್ಸ್ ಮಾಡಿರಬೇಕು. ಕನಿಷ್ಠ 50 ಶೇಕಡಾ ಅಂಕ ಗಳಿಸಿರಬೇಕು.( ಎಸ್‌ಸಿ / ಎಸ್‌ಟಿ ಮತ್ತು ಪಿಡಬ್ಲ್ಯುಬಿಡಿ ವರ್ಗದ ಅಭ್ಯರ್ಥಿಗಳಿಗೆ ಶೇಕಡಾ 45 ಮೀಸಲು).
ವಯೋಮಿತಿಯು 2023ರ ಅಕ್ಟೋಬರ್ 31 ರಂತೆ 18 ವರ್ಷದಿಂದ 24 ವರ್ಷಗಳ ನಡುವೆ ಇರಬೇಕು. ಎಸ್‌ಸಿ/ ಎಸ್‌ಟಿ / ಒಬಿಸಿ (ಎನ್‌ಸಿಎಲ್)/ ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮ ಪ್ರಕಾರ ಗರಿಷ್ಠ ವಯಸ್ಸಿನ ಮಿತಿ ವಿನಾಯಿತಿಯು ಇರಲಿದೆ.
ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆಯಲು ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇ. 40ರಷ್ಟು ಅಂಕಗಳನ್ನು ಗಳಿಸಬೇಕು. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ iocl.com ಪರಿಶೀಲಿಸಬಹುದು.



