ದಾವಣಗೆರೆ: 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ನಲ್ಲಿ 24*7 ಜಲಸಿರಿ ಯೋಜನೆಯಡಿ ನಿರಂತರ ಶುದ್ಧ ಕುಡಿಯುವ ಯೋಜನೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಕ್ಟೋಬರ್ 19 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಂ.ಸಿ.ಸಿ.ಬಿ ಎಫ್.2 ಫೀಡರ್ ವ್ಯಾಪ್ತಿಯ ಎಸ್.ಎಸ್ ಲೇಔಟ್ ಎ.ಬ್ಲಾಕ್, ಕುವೆಂಪು ನಗರ, ಎಂ.ಸಿ.ಸಿ.ಬಿ ಬ್ಲಾಕ್, ಸಿದ್ದವೀರಪ್ಪ ಬಡಾವಣೆ, ಶಾಮನೂರು ರೋಡ್, ಬಿ.ಐ.ಇ.ಟಿ ರೋಡ್, ಗ್ಲಾಸ್ ಹೌಸ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



