ದಾವಣಗೆರೆ; ಜಿಲ್ಲೆಯ ಹರಿಹರದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಬೆಳಗ್ಗೆ ಎದ್ದು ಗರಡಿ ಮನೆಗೆ ಹೋಗಿದ್ದ ಕುಸ್ತಿಪಟು ಬಾಲಕಿ, ಗರಡಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹರಿಹರ ಪಟ್ಟಣದ ಶಿಬಾರ ಸರ್ಕಲ್ ನಲ್ಲಿರುವ ಗರಡಿ ಮನೆಯಲ್ಲಿ 13 ವರ್ಷದ ಬಾಲಕಿ ಕಾವ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾವ್ಯ ಧಾರವಾಡದಲ್ಲಿ ಕುಸ್ತಿ ಹಾಸ್ಟೇಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಎರಡು ದಿನದ ಹಿಂದೆಯಷ್ಟೇ ಹರಿಹರಕ್ಕೆ ಬಂದಿದ್ದ ಕಾವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಸದ್ಯ ಘಟನೆ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.