ದಾವಣಗೆರೆ: ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.17 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-10 ಸಿ.ಜಿ.ಹೆಚ್ ಫೀಡರ್ ವ್ಯಾಪ್ತಿಯ ಪೋಲಿಸ್ ಕೊಟ್ರಸ್,ಎಂ.ಸಿ.ಸಿ.ಎ ಬ್ಲಾಕ್, ವಿನೋಬ ನಗರ, 1ನೇ ಮೇನ್ 2ನೇ ಮೇನ್ ಮುದ್ದಹಳ್ಳಿ ತೋಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.ಎಫ್-09 ಪಿ.ಜೆ ಫೀಡರ್ ವ್ಯಾಪ್ತಿಯ ಪಿ.ಜೆ. ಎಕ್ಸ್ಟೇಷನ್, ಎ.ವಿ.ಕೆ ಕಾಲೇಜ್ರಸ್ತೆ, ಪಿ.ಬಿ ರಸ್ತೆ, ಅರುಣಚಿತ್ರ ಮಂದಿರ ಸರ್ಕಲ್, ರಾಮ & ಕೋ-ಸರ್ಕಲ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳುಎಫ್-17 ಮಹಾನಗರ ಪಾಲಿಕೆ ವ್ಯಾಪ್ತಿಯ ಬೆವಿಕಂ ಆಫೀಸ್, ಪಿ.ಬಿರಸ್ತೆ, ಹಳೆ ಬಸ್ ನಿಲ್ದಾಣ, ಅರುಣ ಸರ್ಕಲ್, ಕಾರ್ಪೊರೇಷನ್ ಆಫೀಸ್, ಎಕ್ಸ್ಟೇಷನ್ ಪೋಲಿಸ್ ಸ್ಟೇಷನ್, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



