ದಾವಣಗೆರೆ: ಜಿಲ್ಲಾ ಬಿಜೆಪಿ ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ ಅವಕಾಶ ಸಿಕ್ಕಾಗೆಲ್ಲ ಕಿಡಿಕಾರುತ್ತಿದ್ದಾರೆ. ಇದಲ್ಲದೆ, ನಾನು ಈ ಬಾರಿಯ ಲೋಕಸಭೆ ಪ್ರಬಲ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ. ಇದಕ್ಕೆ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಟಾಂಗ್ ನೀಡಿದ್ದು, ಬಿಜೆಪಿಯಿಂದ ಹೋಗುವವರು ಹೋಗಬಹುದು, ಬರುವವರು ಬರಬಹುದು. ನಾನು ಗೆಲ್ಲುತ್ತೇನೆ ಅಷ್ಟೇ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನ್ಯಾಕೆ ಅವರನ್ನು (ರೇಣುಕಾಚಾರ್ಯ) ಕರೆದು ಮಾತನಾಡಿಸಬೇಕು? ಕರೆದು
ಮಾತನಾಡಿಸುವ ಪದವೇ ನನ್ನಲ್ಲಿ ಇಲ್ಲ. ಕರೆದು ಮಾತನಾಡಿಸುವ ಕೆಲಸ ರಾಜ್ಯ ನಾಯಕರುಮಾಡುತ್ತಾರೆ. ನನಗೆ ಕರೆದು ಮಾತನಾಡಿಸಬೇಕೆಂದು ಇಲ್ಲಿ ಕೇಳಿದ್ದನ್ನೇ ಅಲ್ಲಿಯೂ ಹೋಗಿ ನೀವು ಹೇಳುತ್ತೀರಿ. ಕರೆದು ಮಾತನಾಡಿಸುವ ಪದ ನನ್ನಲ್ಲಿಲ್ಲ
ರಾಜ್ಯ ನಾಯಕರುಮಾಡುತ್ತಾರೆ. ಪಕ್ಷದಿಂದ ಹೋಗುವವರು ಹೋಗಬಹುದು,ಬರುವವರು ಬರಬಹುದು. ದಾವಣಗೆರೆ ಲೋಕಸಭಾಕ್ಷೇತ್ರದ ಚುನಾವಣೆಯಲ್ಲಿ ನಾನು ಮಾತ್ರ ಗೆಲ್ಲುತ್ತೇನೆ. ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಮತ್ತೆ ನಾನೆ ಸ್ಪರ್ಧೆ ಮಾಡುತ್ತೇನೆ ಎನ್ನುವ ಸುಳಿವು ನೀಡಿದರು.