ದಾವಣಗೆರೆ; ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ತನ್ನ ಐದು ವರ್ಷದ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಬಳಿಯ ಸೂಳೆಕೆರೆಯಲ್ಲಿ ಈ ಘಟನೆ ನಡೆದಿದೆ.
ಕವಿತಾ ಹಾಗೂ ನಿಹಾರಿಕಾ ಎಂಬುವವರೇ ಸಾವನ್ನಪ್ಪಿರುವವವರು.ಶುಕ್ರವಾರ ಕವಿತಾ ಅವರು ಮಗಳೊಂದಿಗೆ ಕಾಣೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪತಿ ಮಂಜುನಾಥ್ ಅವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಹುಡುಕಾಟ ನಡೆಸಿದಾಗ ಸೂಳೆಕೆರೆಯಲ್ಲಿ ಇಬ್ಬರು ಮೃತದೇಹಗಳು ಪತ್ತೆಯಾಗಿವೆ. ಕವಿತಾ ಅವರು ಎರೆಹಳ್ಳಿಯವರು, ಆರು ವರ್ಷದ ಹಿಂದೆ ಹೊನ್ನೆಬಾಗಿಯ ಮಂಜುನಾಥ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು.
ಐದು ವರ್ಷದ ಹೆಣ್ಣು ಮಗು ನಿಹಾರಿಕಾ ಕೂಡಾ ಇದ್ದಳು. ಆದ್ರೆ ಗಂಡನಿಗೆ ಹಾಗೂ ಗಂಡನ ಮನೆಯವರಿಗೆ ವರದಕ್ಷಿಣೆ ಆಸೆಯಂತೆ. ಅದಕ್ಕಾಗಿ ಕವಿತಾಳನ್ನು ಪೀಡಿಸುತ್ತಿದ್ದರಂತೆ. ಇದರಿಂದ ಬೇಸತ್ತು ಕವಿತಾ ತನ್ನ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.