ದಾವಣಗೆರೆ: ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದನ್ನು ಖಂಡಿಸಿ ಅ.16ರಂದು ದಾವಣಗೆರೆ ಬೆಸ್ಕಾಂ ಕಚೇರಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಮುತ್ತಿಗೆ ಹಾಕಲಾಗುವುದು ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಹೇಳಿದರು.
ಅಂದು ಬೆಳಿಗ್ಗೆ 11ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿಯ ಬೆಸ್ಕಾಂ ಕಚೇರಿಗೆ ಸಂಸದ ಜಿ. ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಮಾಜಿ ಶಾಸಕರು,ಮಾಜಿ ಸಚಿವರು, ಮುಖಂಡರ ನೇತೃತ್ವದಲ್ಲಿ ಸಾವಿರಾರು ರೈತರು ಮುತ್ತಿಗೆ ಹಾಕಲಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ತೀವ್ರಬರ, ವಿದ್ಯುತ್ ಕ್ಷಾಮ ತಲೆದೋರಿದೆ. ಎಲ್ಲಾ ಕಡೆ ಲೋಡ್ ಶೆಡ್ಡಿಂಗ್ ದಿನದಿನಕ್ಕೂ ಹೆಚ್ಚುತ್ತಿದೆ. ಇದರಿಂದ ರೈತರು ಬೆಳೆ ಬೆಳೆಯಲು ನಿರಾಮತರ ವಿದ್ಯುತ್ ನೀಡುತ್ತಿಲ್ಲ. ದಿನಕ್ಕೆ 7 ಗಂಟೆ ಬದಲಾಗಿ ಕೇವಲ 2 ಗಂಟೆ ಮಾತ್ರ ವಿದ್ಯುತ್ ಪೂರೈಸಲಾಗುತ್ತಿದೆ. ಇದರಿಂದ ಬೋರ್ ವೆಲ್ ಆಶ್ರಿತ ರೈತರು
ಕಂಗಾಲಾಗಿದ್ದಾರೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರನ್ನು ನಿರ್ಲಕ್ಷಿಸುತ್ತಿದೆ.ಇದೊಂದು ರೈತ ವಿರೋಧಿ ಸರ್ಕಾರ. ವಿದ್ಯುತ್ ಪೂರೈಕೆಯಲ್ಲಿನ ವೈಫಲ್ಯ , ಕಾಂಗ್ರೆಸ್ಸಿನ ಆಡಳಿತ ವೈಫಲ್ಯ ಎದ್ದು
ಕಾಣುತ್ತಿದೆ. ಇನ್ನೂ ಭದ್ರಾ ಕಾಡಾ ಸಮಿತಿ ಅ.15ರಿಂದ ಭದ್ರಾ ನಾಲೆಗಳಿಗೆ ನೀರು ಬಂದ್ ಮಾಡುವುದಾಗಿ ಹೇಳಿದೆ. ಒಂದು
ವೇಳೆ ನೀರು ಬಂದ್ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ, ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ರೈತಮೋರ್ಚಾ ಅಧ್ಯಕ್ಷ ಲೋಕಿಕೆರೆನಾಗರಾಜ, ರಾಜ್ಯ ಸಮಿತಿ ಸದಸ್ಯ ಬಿ.ಎಂ. ಸತೀಶ ಕೊಳೇನಹಳ್ಳಿ, ಕೆ.ಹೇಮಂತಕುಮಾರ, ಧನಂಜಯ ಕಡ್ಲೆಬಾಳು, ಡಿ.ಎಸ್.ಶಿವಶಂಕರ, ಎಚ್.ಎನ್.ಶಿವಕುಮಾರ, ಕೊಟ್ರೇಶ ಗೌಡ, ಬಾತಿ ವೀರೇಶ
ದೊಗ್ಗಳ್ಳಿ, ಬಸಣ್ಣ ಉಪಸ್ಥಿತಿದ್ದರು.