ದಾವಣಗೆರೆ: ನಗರದಲ್ಲಿ ಇಂದು ಸಂಜೆ ಭೀಕರ ದುರಂತವೊಂದು ನಡೆದಿದ್ದು, ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಿದ್ದತೆ ವೇಳೆ ನಡೆದ ಅವಘಡದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.ಪಿಬಿ ರಸ್ತೆಯಲ್ಲಿ ಬಂಟಿಂಗ್ಸ್ ಕಟ್ಟುವಾಗ ಕ್ರೇನ್ ಕೆಳಗೆ ಸಿಲುಕಿ ಯುವಕ ಸಾವನಪ್ಪಿದ್ದಾನೆ. ಹೀಗಾಗಿ ನಾಳೆಯ ಹಿಂದೂ ಮಹಾಗಣಪತಿ ಬೈಕ್ ರ‍್ಯಾಲಿ ರದ್ದು ಮಾಡಲಾಗಿದೆ.
ದಾವಣಗೆರೆಯ ಬಸವರಾಜಪೇಟೆ ನಿವಾಸಿ ಪೃಥ್ವಿರಾಜ್ (26) ಮೃತ ದುರ್ದೈವಿ. ಶನಿವಾರ ಹಿಂದೂ ಮಹಾಗಣಪತಿ ವಿಸರ್ಜನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಿಬಿ ರಸ್ತೆಯಲ್ಲಿ ಕೇಸರಿ ಬಂಟಿಂಗ್ಸ್ ಕಟ್ಟುವಾಗ ಕ್ರೇನ್ ಹರಿದ ಪರಿಣಾಮ ಪೃಥ್ವಿರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಪಿಬಿ ರಸ್ತೆಯ ರೇಣುಕಾಮಂದಿರದ ಬಳಿ ಶೋಭಾಯಾತ್ರೆಗೆ ಬಂಟಿಂಗ್ಸ್ ಕಟ್ಟಲಾಗುತ್ತಿತ್ತು. ಈ ಸಂದರ್ಭದಲ್ಲಿ ಪೃಥ್ವಿರಾಜ್ ಕ್ರೇನ್ ಹಿಂದೆ ನಿಂತಿದ್ದ ಗಮನಿಸದೆ ಚಾಲಕ ಹಿಂದಕ್ಕೆ ಬಿಟ್ಟಿರುವುದರಿಂದ ತಲೆ ಮೇಲೆ ಕ್ರೇನ್ ಹರಿದ ಹಿನ್ನಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾಸ್ಪತ್ರೆಯ ಮುಂಭಾಗ ಮೃತನ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ನಡೆಯಬೇಕಿದ್ದ ಹಿಂದು ಮಹಾ ಗಣಪತಿ ಬೈಕ್ ರ‍್ಯಾಲಿ ರದ್ದುಪಡಿಸಲಾಗಿದೆ.



