ದಾವಣಗೆರೆ; ಸಹಕಾರ ಸಪ್ತಾಹದ ಅಂಗವಾಗಿ 2023 ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿಗೆ ಜಿಲ್ಲಾ ಮಟ್ಟದಲ್ಲಿ ಅರ್ಹ ಶ್ರೇಷ್ಠ ಸಹಕಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಜಿಲ್ಲೆಯಲ್ಲಿ ಕನಿಷ್ಠ 10 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ, ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ರಂಗಗಳಲ್ಲಿ ವಿಶಿಷ್ಟವಾದ ಸಾಧನೆ ಮಾಡಿದ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆ ಮತ್ತು ಆರ್ಥಿಕ ದುರ್ಬಲ ವರ್ಗದ ಅಭಿವೃದ್ದಿಗಾಗಿ ಸಹಕಾರ ಕ್ಷೇತ್ರದ ಮೂಲಕ ಸೇವೆ ಸಲ್ಲಿಸಿದಂತಹ ಜಿಲ್ಲೆಯ ಶ್ರೇಷ್ಠ ಸಹಕಾರಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆಸಕ್ತರು ಅಕ್ಟೋಬರ್ 11 ರಂದು ತಮ್ಮ ವೈಯಕ್ತಿಕ ಪರಿಚಯದೊಂದಿಗೆ 4 ಭಾವಚಿತ್ರಗಳನ್ನು ಲಗತ್ತಿಸಿ ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿ., ಕಲಾಪ್ರಕಾಶ ವೃಂದ, 1ನೇ ಮಹಡಿ, ವಿನೋಬನಗರ 2ನೇ ಮುಖ್ಯರಸ್ತೆ, ಎಂ.ಸಿ.ಸಿ ‘ಎ’ ಬ್ಲಾಕ್, ದಾವಣಗೆರೆ, ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಅನ್ನಪೂರ್ಣ. ಹೆಚ್ ತಿಳಿಸಿದ್ದಾರೆ.



