ದಾವಣಗೆರೆ: ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಸ್ಪೂರ್ತಿ ಸಾಮಾಜಿಕ ಶೈಕ್ಷಣಿಕ ಅಭಿವೃದ್ದಿ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಪರಿಶಿಷ್ಟ ಜಾತಿಯ ಉದ್ಯೋಯೋಗಾಕಾಂಕ್ಷಿಗಳಿಗೆ ಅಕ್ಟೋಬರ್ 6 ರಿಂದ 15 ರವರೆಗೆ ಉದ್ಯಮಶೀಲತಾಭಿವೃದ್ಧಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಕರ್ನಾಟಕ ಉದ್ಯಶೀಲತಾಭಿವೃದ್ದಿ ಕೇಂದ್ರ (ಸಿಡಾಕ್) ಧಾರವಾಡ, ಹಾಗೂ ಸ್ಪೂರ್ತಿ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ದಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಈ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರದಲ್ಲಿ ಭಾಗವಹಿಸುವ ಅಭ್ಯರ್ಥಿಗಳು 18 ರಿಂದ 55 ವರ್ಷ ವಯೋಮಾನದವರಾಗಿರಬೇಕು.
ಅಭ್ಯರ್ಥಿಗಳು 2 ಪಾಸ್ಪೋರ್ಟ್ ಅಳತೆಯ ಫೋಟೋ ಹಾಗೂ ಆಧಾರ್ ಕಾರ್ಡ್ನ ಪ್ರತಿಯೊಂದಿಗೆ, ಜಂಟಿ ನಿರ್ದೇಶಕರ ಕಛೇರಿ, ಸಿಡಾಕ್, ಪ್ಲಾಟ್ ನಂ: 76ಎ-(ಪಿ1), ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ. ರಸ್ತೆ, ದಾವಣಗೆರೆ. ತರಬೇತಿದಾರರಾದ ವಿನಯ ಜಿ.ಕೆ. ಮೊ.ಸಂ: 9886115200 ಹಾಗೂ ಬಸವರಾಜ ಜಿ. ಬಿ. ಮೊ.ಸಂ: 9164742033 ಸಂಪರ್ಕಿಸಲು ಸಿಡಾಕ್ನ ಜಿಲ್ಲಾ ಜಂಟಿ ನಿರ್ದೇಶಕರು ಆರ್.ಪಿ. ಪಾಟೀಲ್ ತಿಳಿಸಿದ್ದಾರೆ.