ಬೆಂಗಳೂರಿನ ನಡು ರಸ್ತೆಯಲ್ಲಿಯೇ ಎಲೆಕ್ಟ್ರಿಕ್ ಕಾರೊಂದು ಧಗಧಗನೇ ಬೆಂಕಿ ಹೊತ್ತಿ ಉರಿದಿದೆ. ಚಾಲಕ ಅಪಾಯದಿಂದ ಪಾರಾಗಿರುವ ಬೆಂಗಳೂರಿನ ಜೆಪಿನಗರದಲ್ಲಿ ನಡೆದಿದೆ. ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಇಡೀ ಕಾರಿಗೆ ಬೆಂಕಿ ಆವರಿಸಿದ್ದು, ಕಾರು ಸಂಪೂರ್ಣಸುಟ್ಟು ಭಸ್ಮವಾದ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕ ಹಾಗೂ ಮತ್ತೋರ್ವ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಲೆಕ್ಟ್ರಿಕ್ ಕಾರಿನಲ್ಲಿ ಹೋಗುತ್ತಿದ್ದಾಗ ಇಂಜಿನ್ನಲ್ಲಿ ಏಕಾಏಕಿ ಹೊಗೆ ಬಂದು ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಕ್ಷಣ ಮಾತ್ರದಲ್ಲಿ ರಸ್ತೆ ಬದಿಗೆ ಕಾರನ್ನು ನಿಲ್ಲಿಸಿದ್ದಾರೆ. ಬಳಿಕ ನೋಡ ನೋಡುತ್ತಿದ್ದಂತೆ ಕಾರು ಸ್ಥಳದಲ್ಲೇ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಭಸ್ಮಗೊಂಡಿದೆ. ಇನ್ನು, ಕಾರಿನಲ್ಲಿದ್ದ ಕೆಲ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಬೆಂಗಳೂರಲ್ಲಿ ಧಗಧಗಿಸಿದ ಎಲೆಕ್ಟ್ರಿಕ್ ಕಾರು pic.twitter.com/bSnB0QqhoQ
— DVG Suddi (@dvg_suddi) October 1, 2023



