Connect with us

Dvgsuddi Kannada | online news portal | Kannada news online

ದಾವಣಗೆರೆ: ಹೊಸ ರಾಶಿ ಅಡಿಕೆ ದರ 46 ಸಾವಿರಕ್ಕೆ ಕುಸಿತ; ಹಳೆಯ ಅಡಿಕೆ ಬೆಲೆಯಲ್ಲಿಯೂ ಇಳಿಕೆ..!

arecanut

ಪ್ರಮುಖ ಸುದ್ದಿ

ದಾವಣಗೆರೆ: ಹೊಸ ರಾಶಿ ಅಡಿಕೆ ದರ 46 ಸಾವಿರಕ್ಕೆ ಕುಸಿತ; ಹಳೆಯ ಅಡಿಕೆ ಬೆಲೆಯಲ್ಲಿಯೂ ಇಳಿಕೆ..!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಇಂದು (ಸೆ.26 ) ಹೊಸ ರಾಶಿ ಅಡಿಕೆ 1100 ರೂ. ಇಳಿಕೆ ಕಂಡಿದೆ. ಹಳೆಯ ಅಡಿಕೆ ದರದಲ್ಲಿಯೂ ಕಡಿಮೆಯಾಗಿದೆ. ಹಳೆ ರಾಶಿ ಅಡಿಕೆ ಗರಿಷ್ಠ 49,899 ರೂ.ಗಳಿಂದ 47,000 ರೂ. ಇಳಿದಿದ್ದು, ಹೊಸ ರಾಶಿ ಅಡಿಕೆ ಗರಿಷ್ಠ 47,169 ರೂ.ಗಳಿಂದ 46,071 ರೂ.ಗೆ ಕುಸಿತವಾಗಿದೆ.

ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇ ನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು, ತಿಂಗಳ ಕೊನೆಯಲ್ಲಿ 48 ಸಾವಿರ ತಲುಪಿತ್ತು. ಇದೀಗ ಸೆಪ್ಟೆಂಬರ್ 15 ರಿಂದ ಸತತ ಕುಸಿತ ಕಾಣುತ್ತಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಸೆ.‌25ರಂದು ಪ್ರತಿ ಕ್ವಿಂಟಾಲ್ ಉತ್ತಮ ಹಳೆ ರಾಶಿ ಅಡಿಕೆ ಕನಿಷ್ಠ ಬೆಲೆ 41,000, ಗರಿಷ್ಠ ಬೆಲೆ 47,00 ಹಾಗೂ ಸರಾಸರಿ ಬೆಲೆ 45,064 ರೂ.ಗೆ ಮಾರಾಟವಾಗಿದೆ. ಹೊಸ ರಾಶಿ ಅಡಿಕೆ ಕನಿಷ್ಠ 43,599 ಗರಿಷ್ಠ 46,071 ಹಾಗೂ ಸರಾಸರಿ 44,800 ರೂ.ಗೆ ಮಾರಾಟವಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top