ದಾವಣಗೆರೆ; ಕಾಲೇಜು ಹುಡುಗಿಯರನ್ನು ರೇಗಿಸುವುದು, ಪೋನ್ ಕರೆ ಮಾಡಿ ಪೀಡಿಸುತ್ತಿದ್ದ ಯುವಕನಿಗೆ ಕಾಲೇಜು ಎದುರಿನ ನಡು ರಸ್ತೆಯಲ್ಲಿಯೇ ಹುಡುಗಿಯರು ಮತ್ತು ಹುಡುಗಿಯರ ಕಡೆಯವರಿಂದ ಚಪ್ಪಲಿಯ ಧರ್ಮದೇಟು ಬಿದ್ದಿದೆ. ಈ ವಿಡಿಯೋ ಸಾಮಾಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ದಾವಣಗೆರೆಯ ಎವಿಕೆ ಕಾಲೇಜ್ ಎದುರಿನ ರಸ್ತೆಯಲ್ಲಿ ನಡೆದಿದೆ. ತ್ಯಾವಣಗಿ ಗ್ರಾಮದ ವಿನಯ್ ಚಪ್ಪಲಿ ಏಟು ತಿಂದ ಯುವಕನಾಗಿದ್ದಾನೆ. ಖಾಸಗಿ ಬಸ್ ಕಂಡಕ್ಟರ್ ಆಗಿದ್ದ ವಿನಯ್, ಮಾಯಕೊಂಡ ಬಳಿಯ ಗ್ರಾಮದ ಯುವತಿಯರಿಬ್ಬರಿಗೆ ಕರೆ ಮಾಡಿ ಅಸಭ್ಯ ಮಾನಾಡಿದ್ದಲ್ಲದೆ, ಕಂಡ ಕಂಡಲ್ಲಿ ರೇಗಿಸುತ್ತಿದ್ದನು. ಹೇಗೋ ಯುವತಿಯರ ಮೊಬೈಲ್ ನಂಬರ್ ಪಡೆದುಕೊಂಡು ಕರೆ ಮಾಡಿ ಪೀಡಿಸುತ್ತಿದ್ದನು. ಇದರಿಂದ ಬೇಸತ್ತು ಕುಟುಂಬದವರಿಗೆ ತಿಳಿಸಿ, ಯುವಕನನ್ನು ಕಾಲೇಜಿನ ಬಳಿ ಕರೆಸಿಕೊಂಡ ಯುವತಿಯರು ಮತ್ತು ಯುವತಿಯರ ಮನೆಯವರು ಧರ್ಮದೇಟು ಕೊಟ್ಟಿದ್ದಾರೆ.
ಕಾಲೇಜಿಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಪದೇ ಪದೇ ಪೋನ್ ಮಾಡಿ ತೊಂದರೆ ಕೊಡುತ್ತಿದ್ದ ವಿನಯ್ ಕಾಟದಿಂದ ಯುವತಿಯರು ರೋಸಿ ಹೋಗಿದ್ದರು. ಯುವತಿಯರು ತಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಉಪಾಯದಿಂದ ಎವಿಕೆ ಕಾಲೇಜು ರಸ್ತೆಗೆ ಯುವಕ ವಿನಯ್‌ನನ್ನು ಕರೆಸಿಕೊಂಡು, ನಡು ರಸ್ತೆಯಲ್ಲಿ ಚಪ್ಪಲಿ ಏಟು ಕೊಟ್ಟಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ದಾವಣಗೆರೆ: ರೈತರ ಪಂಪ್ ಸೆಟ್ ಮೋಟಾರ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 3 ಲಕ್ಷ ಮೌಲ್ಯದ ಮೋಟಾರ್ ಗಳು ವಶ
ದಾವಣಗೆರೆ: ಶ್ರೀಗಂಧ ಮರ ಕಡಿದು ಅಕ್ರಮ ಸಾಗಾಟ; ಒಬ್ಬ ಆರೋಪಿ ಬಂಧನ, ಇನ್ನಿಬ್ಬರು ಪರಾರಿ…!
ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮಹತ್ವದ ಮಾಹಿತಿ; ಅ.1ರಂದು ವಿಶೇಷ ಮಹಾಸಭೆ