ದಾವಣಗೆರೆ; ರೈತರ ಜಮೀನಿಗೆ ನೀರೆತ್ತುವ ಪಂಪ್ ಸೆಟ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 14 ವಿವಿಧ ಕಂಪನಿಯ 3 ಲಕ್ಷ ಬೆಲೆ ಬಾಳುವ ಮೋಟಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ವಿವಿಧ ಗ್ರಾಮಗಳಲ್ಲಿ ಹಲವು ದಿನಗಳಂದ ರೈತರ ನೀರೆತ್ತುವ ಮೋಟಾರುಗಳ ಕಳ್ಳತನವಾಗಿದ್ದವು. ಈ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ.ಎಸ್ ಮಾರ್ಗದರ್ಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ ಅರವಿಂದ ಬಿ.ಎಸ್ ಮತ್ತು ಶ್ರೀ ಅಬ್ದುಲ್ ಖಾದರ ಜಿಲಾನಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳಾದ ಹರಿಹರದ ಸೈಯದ್ ಖಲಂದರ್ (24), ಸೈಯದ್ ಅಲಿ @ ಸಜ್ಜು (22) ಬಂಧಿಸಿದ್ದಾರೆ. ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.14 ವಿವಿಧ ಕಂಪನಿಗಳಗೆ ಸೇರಿದ ಸುಮಾರು 03 ಲಕ್ಷ ಬೆಲೆ ಬಾಳುವ ನೀರೆತ್ತುವ ಮೋಟಾರುಗಳನ್ನು ಅಮಾನತು ಪಡಿಸಿದ್ದು, ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುರೆದಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ಶ್ರೀಗಂಧ ಮರ ಕಡಿದು ಅಕ್ರಮ ಸಾಗಾಟ; ಒಬ್ಬ ಆರೋಪಿ ಬಂಧನ, ಇನ್ನಿಬ್ಬರು ಪರಾರಿ…!