ದಾವಣಗೆರೆ: ಅಕ್ರಮವಾಗಿ ಶ್ರೀಗಂಧ ಮರ ಕಡಿದು ಬೈಕ್‌ನಲ್ಲಿ ಸಾಗಾಟ ಮಾಡುತ್ತಿದ್ದ ಒಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಈ ಘಟನೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುದುರೆಕೊಂಡ ರಾಜ್ಯ ಅರಣ್ಯ ಪ್ರದೇಶ ಬಳಿ ನಡೆದಿದೆ.
ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದ ತಮಿಳರ ಕಾಲೊನಿ ಶ್ರೀನಿವಾಸ ಬಂಧಿತನಾಗಿದ್ದು, ಧನ್‌ಪಾಲ್ ಮತ್ತು ಮುರುಗೇಶ ತಪ್ಪಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯವರು ಗಸ್ತಿನಲ್ಲಿದ್ದಾಗ ಎದುರುಗಡೆಯಿಂದ ಮೂವರು ಬೈಕ್‌ನಲ್ಲಿ ಬರುತ್ತಿದ್ದು, ಅರಣ್ಯ ಇಲಾಖೆ ವಾಹನವನ್ನು ಕಂಡು ಗಾಬರಿಗೊಂಡು ಬೈಕ್ ನಿಲ್ಲಿಸಿದಾಗ ಹಿಂಬದಿಯ ಇಬ್ಬರು ಓಡಿಹೋಗಿದ್ದು, ಬೈಕ್ ಸವಾರನನ್ನು ಹಿಡಿದು ತಪಾಸಣೆ ಮಾಡಿದಾಗ ಆತನ ಬಳಿ ಶ್ರೀಗಂಧದ ತುಂಡುಗಳು, ಮರ ಕತ್ತರಿಸಲು ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೊನ್ನಾಳಿ ವಲಯ ಅರಣಾಧಿಕಾರಿ ಕೆ.ಆರ್.ಚೇತನ ಮಾಹಿತಿ ನೀಡಿದ್ದಾರೆ.
ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತಲಿನ ಜಮೀನಿನಲ್ಲಿನ ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡಿದ ಬಗ್ಗೆ ಆರೋಪಿ ಮಾಹಿತಿ ನೀಡಿದ್ದಾನೆ. ಆರೋಪಿಯನ್ನು ಹೊನ್ನಾಳಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ನ್ಯಾಮತಿ ಶಾಖೆ ಉಪ ವಲಯ ಅರಣ್ಯಾಧಿಕಾರಿ ಬರ್ಕತ್‌ಅಲಿ ಎಂ.ಬಿ., ಕುದುರೆಕೊಂಡ ಗಸ್ತು ಅರಣ್ಯ ಪಾಲಕ ನಿಂಗರಾಜ ಹರವಿ, ಫಾರೆಸ್ಟರ್ ಕೃಷ್ಣಮೂರ್ತಿ, ವನಪಾಲಕರಾದ ಭೀಮಪ್ಪ, ಪ್ರವೀಣ ಭಾಗವಹಿಸಿದ್ದರು.
ಸೆ.23ರವರೆಗೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ; ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ