ದಾವಣಗೆರೆ: ಚೀಲ ತುಂಬಿ ಗೋಡಾಮಿನಲ್ಲಿ ಇಟ್ಟಿದ್ದ ಅಡಿಕೆ ಕಳ್ಳತನ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದು, ಇನೊಬ್ಬನಿಗೆ ಬಲೆ ಬೀಸಿದ್ದಾರೆ. ಆರೋಪಿಯಿಂದ ಸುಮಾರು 2 ಲಕ್ಷ ರೂ. ಬೆಳೆಬಾಳುವ 05 ಕ್ವಿಂಟಾಲ್ ಅಡಿಕೆ ಮತ್ತು ಅಡಿಕೆ ಸಾಗಾಣಿಕೆ ಕೃತ್ಯಜ್ಕೆ ಬಳಸಿದ್ದ ವಾಹನ ಸೇರಿ ಒಟ್ಟು 4 ಲಕ್ಷ ಮೌಲ್ಯದ ಸ್ವತ್ತುನ್ನು ವಶಕ್ಕೆ ಪಡೆಯಲಾಗಿದೆ.
ಚನ್ನಗಿರಿ ಉಪವಿಭಾಗ ಸಂತೇಬೆನ್ನೂರು ಠಾಣಾ ಸರಹದ್ದಿನ ಹೊಸುರು ಗ್ರಾಮದಲ್ಲಿ ಗೋಡಾಮಿನಲ್ಲಿ ಇಟ್ಟಿದ್ದ ಸುಮಾರು 15 ಕ್ವಿಂಟಾಲ್ ಅಡಿಕೆ ಕಳ್ಳತನವಾದ ಬಗ್ಗೆ ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಪತ್ತೆಗಾಗಿ ಪೊಲೀಸ್ ಅಧೀಕ್ಷಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಡಿವೈಎಸ್ಪಿ ಡಾ. ಸಂತೋಷ ಕೆ.ಎಂ ಮಾರ್ಗದರ್ಶನದಲ್ಲಿ ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪಿಎಸ್.ಐ ರೂಪಾ ತೆಂಬದ್ ಸಿಬ್ಬಂದಿಗಳಾದ ಸತೀಶ, ರುದ್ರೇಶ ಎಂ., ಶಂಕರಗೌಡ, ಆಂಜನೇಯ, ರಾಘವೇಂದ್ರ, ಪರಶುರಾಮ, ಪ್ರವೀಣಗೌಡ, ರವಿಕುಮಾರ ಒಳಗೊಂಡ ತಂಡ ರಚನೆ ಮಾಡಲಾಗಿತ್ತು.
ಈ ತಂಡವು ಪ್ರಕರಣದ ಆರೋಪಿ ಕಾರ್ತಿಕ್ ಎಸ್.ಹೆಚ್, 26 ವರ್ಷ, ಡ್ರೈವರ್ ವೃತ್ತಿ, ವಾಸ ಶೆಟ್ಟಿಹಳ್ಳಿ ಗ್ರಾಮ, ಶೀವಮೊಗ್ಗ ತಾ, ಜಿಲ್ಲೆ, ಈತನನ್ನು ಬಂಧನ ಮಾಡಿದೆ. ಆರೋಪಿತನಿಂದ ಸುಮಾರು 2 ಲಕ್ಷ ರೂ /- ರೂ ಬೆಳೆಬಾಳುವ 05 ಕ್ವಿಂಟಾಲ್ ಅಡಿಕೆ ಮತ್ತು ಅಡಿಕೆ ಸಾಗಾಣಿಕೆ ಮಾಡಲು ಬಳಸಿದ ಸುಮಾರು 02 ಲಕ್ಷ ರೂ ಬೆಲೆಬಾಳುವು ಕೆಎ-51 ಎ-8066 ಮಹೀಂದ್ರಾ ಮ್ಯಾಕ್ಷಿಮೋ ಸೇರಿ ಒಟ್ಟು 4 ಲಕ್ಷ ರೂ ಬೆಲೆವಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿರುತ್ತದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಎಸ್ಪಿ ಆರ್ ಬಿ ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು; ಸೆ.20ರವರೆಗೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ದಾವಣಗೆರೆ: ಇಂದಿನ ಹೊಸ, ಹಳೆಯ ರಾಶಿ, ಬೆಟ್ಟೆ ಅಡಿಕೆ ಬೆಲೆ ಎಷ್ಟಿದೆ..? ಇಲ್ಲಿದೆ ಮಾಹಿತಿ..



