ದಾವಣಗೆರೆ: ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿಯಾದ ನಂತರ ರೇಣುಕಾಚಾರ್ಯ ಹೇಳಿದ್ದೇನು..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಬಿಜೆಪಿ ಪಕ್ಷಕ್ಕೆ ರೆಬಲ್ ಹೇಳಿಕೆ ಕೋಡುತ್ತಿರುವ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ನಿನ್ನೆ ಉಚ್ಚಾಟಿತ ಮಾಜಿ ಶಾಸಕ ಗುರುಸಿದ್ದನಗೌಡ ಅವರನ್ನು ಭೇಟಿಯಾಗಿದ್ದರು. ಸೋಮವಾರ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿ ಪಕ್ಷದಿಂದ ವಜಾ ಆಗಿರುವ ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಗೆ ರೇಣುಕಾಚಾರ್ಯ ಭೇಟಿ ನೀಡಿ ಚರ್ಚಿಸಿದರು.

ಚನ್ನಗಿರಿ ತಾಲ್ಲೂಕಿನ ಚನ್ನೇಶಪುರ ಗ್ರಾಮದಲ್ಲಿರುವ ಮಾಡಾಳ್ ವಿರೂಪಾಕ್ಷಪ್ಪ ರವರ ನಿವಾಸಕ್ಕೆ ಉಚ್ಚಾಟಿತ ಮಾಜಿ ಶಾಸಕ ಗುರುಸಿದ್ದನಗೌಡ್ರು ಹಾಗು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಭೇಟಿ ನೀಡಿ ಕೆಲ ಕಾಲ ಮಾತುಕತೆ ನಡೆಸಿದರು. ರೇಣುಕಾಚಾರ್ಯ , ಜಿಲ್ಲೆಯ ಬಿಜೆಪಿ ಅತೃಪ್ತರನ್ನು ಭೇಟಿಯಾಗುತ್ತಿದ್ದಾರೆ.

ಲೋಕಾಯುಕ್ತ ಪ್ರಕರಣದಲ್ಲಿ ಸಿಲುಕಿ ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದ ಮಾಡಾಳ್ ವಿರೂಪಾಕ್ಷಪ್ಪ ಭೇಟಿಗೆ ಮಾಡಿ ಜಿಎಂ ಸಿದ್ದೇಶ್ವರ್ ರವರಿಗೆ ನಾವೇಲ್ಲ ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಿದ್ರು. ಇನ್ನು ಈ ಎರಡು ಭೇಟಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ರೇಣುಕಾಚಾರ್ಯ ನಡೆ ನಿಗೂಢವಾಗಿದೆ. ಇನ್ನು ಲೋಕಾಸಭಾ ಚುನಾವಣೆಯ ಟಿಕೆಟ್ ಅಕಾಂಕ್ಷಿ ಯಾಗಿರುವ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅತೃಪ್ತರನ್ನು ಉಚ್ಚಾಟಿತರನ್ನು ಭೇಟಿಯಾಗಿ, ಹಾಲಿಬ ಸಂಸದ ಸಿದ್ದೇಶ್ವರಗೆ ನೇರ ಸ್ಪರ್ಧಿಯಾಗಿದ್ದಾರೆ.

ಮಾಡಾಳ್ ವಿರೂಪಾಕ್ಷಪ್ಪನವರನ್ನು ಭೇಟಿ ನಂತರ ಮಾತನಾಡಿದ ಎಂಪಿ ರೇಣುಕಾಚಾರ್ಯ, ಯಾವತ್ತು ಬಕೆಟ್ ಹಿಡಿಯುವ ಕೆಲಸ ಮಾಡೋದಿಲ್ಲ. ಕಹಿ ಘಟನೆಗಳ ಸತ್ಯಾಂಶ ಹೊರ ಬರುತ್ತದೆ. ವಿರೂಪಾಕ್ಷಪ್ಪನವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ,ಆದರೆ ಕೆಲ ಘಟನೆಯಿಂದ ಅವರ ಕುಟುಂಬಕ್ಕೆ ಸಂಕಷ್ಟ ಬಂದಿದೆ, ನಾನು ಅಗಿನಿಂದಲೂ ಅವರ ಕುಟುಂಬದ ಜೊತೆ ಇದ್ದು ಧೈರ್ಯ ತುಂಬಿದ್ದೇನೆ, ಬಿಜೆಪಿಯಿಂದ ನನಗೂ ನೋಟೀಸ್ ನೀಡಿದ್ದಾರೆ, ಸಂಘಟನೆ ಕತ್ತರಿಯಾಗಬಾರದು ದಾರ ಸೂಜಿಯಾಗಬೇಕು.

ಕೆಲವರು ಯಾರು ಬಂದರೇನು ಇದ್ದರೇನು ಎಂಬ ನಿರ್ಲಕ್ಷ್ಯದ ಮಾತುಗಳನ್ನಾಡುತ್ತಿದ್ದಾರೆ. ಯಡಿಯೂರಪ್ಪ ಮಾಸ್ ಲೀಡರ್, ಆದರೆ, ಅವರನ್ನು ಈಗ ಹೇಗೆ ನಡೆಸಿಕೊಳ್ಳುತ್ತಿರುವುದು ನೋವಾಗಿದೆ. ಸತ್ಯ ಹೇಳಿದ್ದಕ್ಕೆ ಕೆಲವರು ನಮ್ಮ ಮೇಲೆ ಸಿಟ್ಟಾಗಿದ್ದಾರೆ. ಬಿಜೆಪಿಯನ್ನು ಕೆಲವರು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ನೋಡುತ್ತಿದ್ದಾರೆ. ಬಿಜೆಪಿ ಯಾರೋಬ್ಬರ ಆಸ್ತಿಯಲ್ಲ ಕಾರ್ಯಕರ್ತರ ಆಸ್ತಿ. ಈ ಬಾರಿ ದಾವಣಗೆರೆಯಿಂದ ಲೋಕಸಭೆ ಬಿಜೆಪಿ ಪ್ರಬಲ ಆಕಾಂಕ್ಷಿ ಎಂದು ರೇಣುಕಾಚಾರ್ಯ ಮತ್ತೊಮ್ಮೆ ಹೇಳಿದರು.

ನಾವು ನೋವಿನಲ್ಲಿದ್ದೇವೆ, ಯಾವುದೇ ರಾಜಕೀಯ ಬದಲಾವಣೆ ಬೆಳವಣಿಗೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಿಲ್ಲ, ಚುನಾವಣೆ ಸಮೀಪಿಸಿದಾಗ ಒಂದು ಪಕ್ಷಕ್ಕೆ ಬೆಂಬಲ ಸೂಚಿಸುತ್ತೇವೆ, ಸದ್ಯ ಮಟ್ಟಿಗೆ ತಟಸ್ಥ ನಿಲುವು ವ್ಯಕ್ತಪಡಿಸಿದರು, ಗುರುಸಿದ್ದನಗೌಡ ಹಾಗು ರೇಣುಕಾಚಾರ್ಯ ಭೇಟಿ ಸಹಜ ಬೇಟಿಯಾಗಿದೆ, ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಬೆಂಗಳೂರಿನಲ್ಲಿ ದಾವಣಗೆರೆ ಉಸ್ತುವಾರಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್‌ ಭೇಟಿ ಸಹಜ ಭೇಟಿ, ನಮಗೆ ರಾಜಕಾರಣದಲ್ಲಿ ಎಲ್ರೂ ಬೇಕು ಎಂದು ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರ ಮಲ್ಲಿಕಾರ್ಜುನ ತಿಳಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *