ಡಿವಿಜಿ ಸುದ್ದಿ, ದಾವಣಗೆರೆ: ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಜ.18 ರಂದು ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢಶಾಲೆಯ ಮಹೇಶ್ ಪಿಯು ಕಾಲೇಜು ಆವರಣದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜಯಂತಿಯನ್ನು ಆಯೋಜಿಸಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಾಧನಾಶ್ರಮದ ಮಾತಾ ಯೋಗಾನಂದಮಯಿ ಗುರೂಜಿ ವಹಿಸಿಕೊಳ್ಳಲಿದ್ದು,ಅಧ್ಯಕ್ಷತೆಯನ್ನು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಹೇಶ್ ಪಾಟೀಲ್ ವಹಿಸಿಕೊಳಲಿದ್ದಾರೆ.

ಮುಖ್ಯ ಅಥಿತಿಯಾಗಿ ಶಾಸಕ ಎಸ್.ಎ ರವೀಂದ್ರನಾಥ್, ಪಾಲಿಕೆ ಸದಸ್ಯೆ ವೀಣಾ ನಂಜಪ್ಪ , ಮಾಜಿ ಉಪ ಮೇಯರ್ ನಾಗರತ್ನಮ್ಮ, ರಾಮಾಂಜನೇಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಟಿ. ಬಸವರಾಜ್, ಸಿಸ್ಟರ್ ನಿವೇದಿತ ಮಹಿಳಾ ಸಮಾಜದ ಅಧ್ಯಕ್ಷೆ ಪಲ್ಲವಿ ಪಾಟೀಲ್, ನಾಗರಿಕ ಹಿತರಕ್ಷಣಾ ಸಮಿತಿ ವಸಂತರಾಜು ಭಾಗಿಯಾಗಲಿದ್ದಾರೆ.
ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಯುವ ಬ್ರಿಗೇಡ್ ಸಂಚಾಲಕ ಕಿರಣ್ ರಾಮ್ ಉಪನ್ಯಾಸ ನೀಡಲಿದ್ದು, ಮಕ್ಕಳ ತಜ್ಞ ಡಾ. ಬಸವಂತಕುಮಾರ್ ಜಿ.ಆರ್, ದೈಹಿಕ ಶಿಕ್ಷಕ ವೀರಭದ್ರಪ್ಪ ಎ.ಆರ್ ಅವರನ್ನು ಸನ್ಮಾನಿಸಲಾಗುವುದು.



